ಮಂಗಳೂರು, ಸೆ. 22, 2020 (ಕರಾವಳಿ ಟೈಮ್ಸ್) : ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದ ಗಂಭೀರ ಸಮಸ್ಯೆಗಳ ಹಿನ್ನಲೆಯಲ್ಲಿ ಡಿವೈಎಫ್‍ಐ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆ, ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆಯು ಮಂಗಳವಾರ ಕೊಡಿಯಾಲ್‍ಬೈಲ್ ಸಿಬಿಇಯು ಗೋಲ್ಡನ್ ಜ್ಯುಬುಲಿ ಹಾಲ್‍ನಲ್ಲಿ ನಡೆಯಿತು.
ಡಿವೈಎಫ್‍ಐ ರಾಜ್ಯಾದ್ಯಕ್ಷ ಮುನೀರ್ ಕಾಟಿಪಳ್ಳ ಸಭೆಯ ಅದ್ಯಕ್ಷತೆ ವಹಿಸಿದ್ದರು. ಡಾ ಶ್ರೀನಿವಾಸ್ ಕಕ್ಕಿಲಾಯ, ಡಿಎಸ್‍ಎಸ್ ಮುಖಂಡ ಎಂ ದೇವದಾಸ್, ಸಾಮಾಜಿಕ ಮುಖಂಡರಾದ ಎಂ.ಜಿ. ಹೆಗಡೆ, ರೆನ್ನಿ ಡಿ’ಸೋಜ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್‍ಬೈಲ್, ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್, ಫಾರೂಕ್ ಉಳ್ಳಾಲ್, ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೇಪಾಡಿ, ದಯಾನಾಥ್ ಕೋಟ್ಯಾನ್, ಯಶವಂತ ಮರೋಳಿ, ರಾಮಚಂದ್ರ ಬಬ್ಬುಕಟ್ಟೆ, ವಿಚಾರವಾದಿ ಪೆÇ್ರ ನರೇಂದ್ರ ನಾಯಕ್, ಸಿಪಿಐಎಂ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ರೈತ ಮುಖಂಡ ಕೆ ಯಾದವ ಶೆಟ್ಟಿ, ಸಿಪಿಐ ಮುಖಂಡರಾದ ಎಚ್ ವಿ ರಾವ್, ಕರುಣಾಕರ್, ಎಐವೈಎಫ್ ಮುಖಂಡ ಸೀತರಾಮ್ ಬೇರಿಂಜೆ, ರೈತ ಮುಖಂಡ ರೋಸ್ವಾಲ್ಡ್ ಫೆರ್ನಾಂಡೀಸ್, ಸಮುದಾಯ ಮುಖಂಡರಾದ ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು, ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ತಿಮ್ಮಯ್ಯ ಕೊಂಚಾಡಿ, ಆಶಾ ಬೋಳೂರು, ಅಸುಂತ ಡಿ’ಸೋಜ, ಎಸ್.ಎಫ್.ಐ. ಮುಖಂಡರಾದ ಮಾಧುರಿ ಬೋಳಾರ್, ಪ್ರಮಿಳಾ ದೇವಾಡಿಗ, ಡಿವೈಎಫ್‍ಐ ಜಿಲ್ಲಾದ್ಯಕ್ಷ ಬಿ.ಕೆ. ಇಂತಿಯಾಝ್, ಮುಖಂಡರಾದ ಅಶ್ರಫ್ ಕೆ.ಸಿ.ರೋಡ್, ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ರಫೀಕ್ ಹರೇಕಳ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment