ಮಂಗಳೂರು, ಸೆ. 18, 2020 (ಕರಾವಳಿ ಟೈಮ್ಸ್) : ಕೊರೋನಾ ಹೆಸರಿನಲ್ಲಿ ಜನರನ್ನು ವಂಚಿಸುವ ಖಾಸಗಿ ಆಸ್ಪತ್ರೆಗಳ ನೀತಿ ಖಂಡಿಸಿ ಡಿ.ವೈ.ಎಫ್.ಐ ವತಿಯಿಂದ ಮಂಗಳೂರಿನ ಆರೋಗ್ಯಾಧಿಕಾರಿ ಕಛೇರಿ ಮುಂಭಾಗ ಅಣುಕು ಶವ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಯಿತು.
ರೋಗಿಗಳನ್ನು ಕೊರೋನಾ ಚಿಕಿತ್ಸೆ ಹೆಸರಲ್ಲಿ ವಂಚಿಸಿದ ಖಾಸಗೀ ಆಸ್ಪತ್ರೆಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ, ಎಲ್ಲಾ ಸೋಕಿಂತರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ಡಿ.ವೈ.ಎಫ್.ಐ ಜಿಲ್ಲಾ ಮುಖಂಡರಾದ ಸಾದಿಕ್ ಕಣ್ಣೂರು, ನಿತಿನ್ ಕುತ್ತಾರ್, ನವೀನ್ ಬಿ., ಮನೋಜ್ ವಾಮಂಜೂರು, ಅಶ್ರಫ್ ಕೆ.ಸಿ. ರೋಡ್, ಆಶಾ ಬೋಳೂರು, ಪ್ರಮೀಳಾ ದೇವಾಡಿಗ, ಸುನಿಲ್ ತೇವುಲ, ಚರಣ್ ಶೆಟ್ಟಿ, ತುಳಸೀದಾಸ್ ವಿಟ್ಲ, ಎಸ್.ಎಫ್.ಐ ಮುಖಂಡರಾದ ಮಾಧುರಿ ಬೋಳಾರ್ ಮೊದಲಾದವರು ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.
0 comments:
Post a Comment