ನವದೆಹಲಿ, ಸೆ. 14, 2020 (ಕರಾವಳಿ ಟೈಮ್ಸ್) : ಸೋಮವಾರ ಆರಂಭವಾಗಿರುವ ಸಂಸತ್ ಮುಂಗಾರು ಅಧಿವೇಶನಕ್ಕೂ ಮುನ್ನ ಭಾನುವಾರ ಸಂಸದರಿಗೆ ಮಾಡಲಾದ ಕಡ್ಡಾಯ ಕೊರೋನಾ ಪರೀಕ್ಷೆಯಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸಹಿತ 30 ಮಂದಿ ಸಂಸದರಿಗೆ ಹಾಗೂ 50ಕ್ಕೂ ಹೆಚ್ಚು ಸಂಸತ್ತಿನ ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಬಿಜೆಪಿಯ 12 ಸಂಸದರು, ವೈಎಸ್‍ಆರ್ ಕಾಂಗ್ರೆಸ್ಸಿನ 2, ಶಿವಸೇನೆ, ಡಿಎಂಕೆ ಮತ್ತು ಆರ್‍ಎಲ್‍ಪಿ ಪಕ್ಷದ ತಲಾ ಓರ್ವ ಸಂಸದರಿಗೆ ಕೊರೋನಾ ದೃಢಪಟ್ಟಿದೆ. ಈ ಪೈಕಿ ಕೊರೋನಾಗೆ ತುತ್ತಾಗಿರುವ ಬಿಜೆಪಿಯ ಸಂಸದ ಸುಕಾಂತ್ ಮಜೂಂದಾರ್ ತಮಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಮೀನಾಕ್ಷಿ ಲೇಕಿಗೂ ಕೊರೋನಾ ವಕ್ಕರಿಸಿದೆ. ಇದಕ್ಕೂ ಮುನ್ನ ಅಮಿತಾ ಶಾ ಸೇರಿದಂತೆ ಏಳು ಕೇಂದ್ರ ಸಚಿವರು ಮತ್ತು 25 ಸಂಸದರು ಕೊರೋನಾಗೆ ತುತ್ತಾಗಿದ್ದರು.
0 comments:
Post a Comment