ಬೆಂಗಳೂರು, ಸೆ. 25, 2020 (ಕರಾವಳಿ ಟೈಮ್ಸ್) : ಸಿಇಟಿ-2020ರಲ್ಲಿ ರ್ಯಾಂಕ್ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಕೃಷಿ ಕೋಟಾದಡಿ ಅರ್ಹತೆ ಪಡೆಯಲು ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡದೆ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಸೆ. 25 ರಿಂದ ಸೆ. 29ರ ಸಂಜೆ 5 ಗಂಟೆಯ ಒಳಗೆ ಮೂಲ ದಾಖಲೆಗಳನ್ನು ಸಂಬಂಧಪಟ್ಟ ಕೃಷಿ/ ತೋಟಗಾರಿಕೆ/ ಪಶು ಸಂಗೋಪನೆ ವಿಶ್ವವಿದ್ಯಾನಿಲಯಗಳಲ್ಲಿ ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡಬಹುದಾಗಿದೆ. ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಇದು ಅಂತಿಮ ಅವಕಾಶವಾಗಿರುತ್ತದೆ. ಮುಂದೆ ಯಾವುದೇ ದಿನಾಂಕ ವಿಸ್ತರಣೆ ಮಾಡಲಾಗುವುದಿಲ್ಲ.
ಈ ಮೊದಲು ಶುಲ್ಕ ಪಾವತಿಸಿ ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಅನರ್ಹರಾದ ಅಭ್ಯರ್ಥಿಗಳಿಗೂ ಮತ್ತೊಂದು ಅವಕಾಶ ನೀಡಲಾಗಿದೆ. ಅವರು ಸಂಬಂಧಪಟ್ಟ ಆಯಾ ಕೃಷಿ ವಿಶ್ವವಿದ್ಯಾನಿಲಯಗಳ ಪರಿಶೀಲನಾ ಕೇಂದ್ರಗಳಿಗೆ ಸರಿಯಾದ ದಾಖಲೆಗಳ ಸಹಿತ ಖುದ್ದಾಗಿ ಸಲ್ಲಿಸಿ ಪರಿಶೀಲಿಸಿಕೊಳ್ಳಲು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಸಚಿವರ ಪ್ರಕಟಣೆ ತಿಳಿಸಿದೆ.
0 comments:
Post a Comment