ಬಂಟ್ವಾಳ, ಸೆ. 28, 2020 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬೊಂಡಾಲ-ಅಂತರಗುತ್ತು ನಿವಾಸಿ ಮಹಿಳೆ ಯಮುನಾ ಶೆಟ್ಟಿ (60) ಅವರ ಮೃತದೇಹ ಭಾನುವಾರ ನಂದಾವರ ಸೇತುವೆ ಬಳಿ ತೋಡಿನಲ್ಲಿ ಪತ್ತೆಯಾಗಿದೆ.
ಕಳೆದ ಸೆ 24 ರಂದು ಮೃತ ಮಹಿಳೆ ಸುರತ್ಕಲ್ ಮಗನ ಮನೆಯಿಂದ ನೇಜಿ ಕಾರ್ಯ ನಡೆಸಲಿಕ್ಕಿದೆ ಎಂದು ಹೊರಟವರು ಬಳಿಕ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ನಂದಾವರ ಸೇತುವೆ ಬಳಿ ತೋಡಿನಲ್ಲಿ ಮೃತದೇಹವೊಂದು ತೇಲಾಡುತ್ತಿರುವುದನ್ನು ಕಂಡ ಸ್ಥಳೀಯರು ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ ಗುರುತು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment