ಹಿರಿಯ ನಾಗರಿಕರು ಎಂದೂ ನೋಡದ ಮಹಿಳೆಯಿಂದ ಅನಾಗರಿಕ ವರ್ತನೆಗೆ ವ್ಯಾಪಕ ಅಕ್ರೋಶ
ಕಾಲು ಹಿಡಿದು ಅಂಗಲಾಚಿದರೂ ಕ್ಯಾರೇ ಅನ್ನದೆ ದರ್ಪ ಮುಂದುವರಿಸಿದ ಮಹಿಳೆಗೆ ನೆಟ್ಟಿಗರಿಂದ ಛೀಮಾರಿ
ಘಟನೆಯ ವೀಡಿಯೋ ಜಾಲತಾಣಗಳಲ್ಲಿ ವೈರಲ್
ಬೆಂಗಳೂರು, 07 ಸೆಪ್ಟೆಂಬರ್, 2020 (ಕರಾವಳಿ ಟೈಮ್ಸ್) : ಸಾಲ ಮರುಪಾವತಿಗೆ ಸೂಚನೆ ನೀಡಲು ಬಂದ ಬ್ಯಾಂಕ್ ಸಿಬ್ಬಂದಿಗೆ ಅತ್ಯಾಚಾರದ ಕೇಸ್ ಹಾಕುವ ಬಗ್ಗೆ ಮಹಿಳೆಯೋರ್ವರು ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ಯಾಂಕಿನಲ್ಲಿ ಪಡೆದ ಸಾಲವನ್ನು ವಾಪಸ್ ಕೊಡಿ ಎಂದು ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿ ಮಹಿಳೆಯ ಮನೆಗೆ ಬಂದಿದ್ದಾರೆ. ಈ ವೇಳೆ ಮಹಿಳೆ ವಿನಾ ಕಾರಣ ಜಗಳ ಆರಂಭಿಸಿ ನಿಮ್ಮ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದಾಳೆ.
ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿದ್ದಾಳೆ. ಅಲ್ಲದೇ ನಿಮ್ಮ ಫೋಟೋವನ್ನು ಫೇಸ್‍ಬುಕ್‍ಗೆ ಹಾಕಿ ಅರೆಸ್ಟ್ ಮಾಡಿಸುತ್ತೇನೆ ಎಂದಿದ್ದಾಳೆ. ಈ ವೇಳೆ ಸಿಬ್ಬಂದಿಯೋರ್ವರು ಮಹಿಳೆಯ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬಿಡಿ ಎಂದು ಭಿನ್ನವಿಸಿಕೊಂಡರೂ ಕೇಳಿಸಿಕೊಳ್ಳದ ಮಹಿಳೆ ತನ್ನ ದರ್ಪದ ವರ್ತನೆ ಮುಂದುವರಿಸಿದ್ದಾಳೆ. ವಸೂಲಾತಿಗೆ ಬಂದ ಬ್ಯಾಂಕ್ ಸಿಬ್ಬಂದಿಗಳು ಹಿರಿಯ ನಾಗರಿಕರು ಎಂಬುದನ್ನೂ ಗಣನೆಗೆ ಪಡೆಯದ ಮಹಿಳೆ ನಡೆದುಕೊಂಡ ರೀತಿ ಎಂತಹವರನ್ನೂ ಹುಬ್ಬೇರಿಸುವಂತೆ ಮಾಡಿದೆ. ಮಹಿಳೆಯ ಈ ವರ್ತನೆ ಇದೀಗ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
0 comments:
Post a Comment