ಮಂಗಳೂರು, ಸೆ. 25, 2020 (ಕರಾವಳಿ ಟೈಮ್ಸ್) : ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ಮಂಗಳೂರು ಇದರ ವತಿಯಿಂದ ಅಕ್ಟೋಬರ್ 3 ರಂದು ನಡೆಯುವ ಬ್ಯಾರಿ ಭಾಷಾ ದಿನಾಚರಣಾ ಪ್ರಯುಕ್ತ, ಬ್ಯಾರಿ ಭಾಷೆ ಗೊತ್ತಿರುವ ಸಾರ್ವಜನಿಕರಿಗೆ ಸೆ. 26 ರಂದು ಶನಿವಾರ (ನಾಳೆ) ಬೆಳಿಗ್ಗೆ ಗಂಟೆ 10.30ಕ್ಕೆ ನಗರದ ನೆಲ್ಲಿಕಾಯಿ ರಸ್ತೆಯ ನ್ಯಾಷನಲ್ ಟ್ಯುಟೋರಿಯಲ್ ಸಭಾಂಗಣದಲ್ಲಿ ಆಶು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಗುವುದು. ಆಸಕ್ತರು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಪರಿಷತ್ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment