ಸಚಿವ ಸಿಟಿ ರವಿಗೂ ಪಕ್ಷದಲ್ಲಿ ರಾಷ್ಟ್ರೀಯ ಸ್ಥಾನಮಾನ
ನವದೆಹಲಿ, ಸೆ. 26, 2020 (ಕರಾವಳಿ ಟೈಮ್ಸ್) : ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿವ ಸಿ.ಟಿ. ರವಿ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಪದಾಧಿಕಾರಿಗಳನ್ನು ಘೋಷಣೆ ಮಾಡಿದ್ದು, ಈ ಹಿನ್ನಲೆಯಲ್ಲಿ ಈ ಆಯ್ಕೆ ನಡೆದಿದೆ.
ಉತ್ತಮ ವಾಕ್ಚಾತುರ್ಯ ರೂಢಿಸಿಕೊಂಡು ದೇಶದ ಗಮನ ಸೆಳೆದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರು ಹೊಸ ಜವಾಬ್ದಾರಿಯ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗಿ ತೊಡಗಿಸಿಕೊಳ್ಳಲಿದ್ದಾರೆ. ಒಬಿಸಿ ಮೋರ್ಚಾದ ಅಧ್ಯಕ್ಷರನ್ನಾಗಿ ತೆಲಂಗಾಣದ ಡಾ. ಕೆ. ಲಕ್ಷ್ಮಣ್ ಅವರನ್ನು ನೇಮಕ ಮಾಡಲಾಗಿದೆ. ರಾಷ್ಟ್ರೀಯ ವಕ್ತಾರರನ್ನಾಗಿ ಉತ್ತರಾಖಂಡ್ ರಾಜ್ಯದ ಅನಿಲ್ ಬಲುನಿ, ಸಂಜಯ್ ಮಯೂಖ್, ಡಾ. ಸಂಬಿತ್ ಪಾತ್ರ, ಡಾ. ಸುಧಾಂಶು ತ್ರಿವೇದಿ, ಡಾ. ಸಯೀದ್ ಶಾನವಾಜ್ ಹುಸೇನ್ ಅವರನ್ನು ನೇಮಕ ಮಾಡಲಾಗಿದೆ.
0 comments:
Post a Comment