ಬಂಟ್ವಾಳ, ಸೆ. 12, 2020 (ಕರಾವಳಿ ಟೈಮ್ಸ್) : ನಗರ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಪುರಸಭಾ ಕಛೇರಿಯಲ್ಲಿ ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಶುಕ್ರವಾರ ನಡೆಯಿತು.
ನಗರ ಆರೋಗ್ಯ ಕೇಂದ್ರದ ಎ ಆರ್ ಎಸ್ ಸಮಿತಿ ಅಧ್ಯಕ್ಷ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿ’ಮೆಲ್ಲೋ, ಸಹಾಯಕ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ಮೊದಲಾದವರು ಉಪಸ್ಥಿತದ್ದರು. ತಜ್ಞ ವೈದ್ಯರಾದ ಡಾ ಚೇತನ್, ಡಾ ಸಂದೀಪ್ ಕುಡ್ವ, ಡಾ ಅಶ್ವಿನ್ ಮೊದಲಾದವರ ತಂಡ ಸಾರ್ವಜನಿಕರ ಆರೋಗ್ತ ತಪಾಸಣೆ ನಡೆಸಿತು.
0 comments:
Post a Comment