ಬಂಟ್ವಾಳ, ಸೆ. 21, 2020 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ತಹಜ್ಜುದ್ ಅಭಿಯಾನ ಕಾರ್ಯಕ್ರಮ ಪಾಣೆಮಂಗಳೂರು-ಆಲಡ್ಕದ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಯಲ್ಲಿ ನಡೆಯಿತು.
ದ.ಕ. ಜಿಲ್ಲಾ ಇಬಾದ್ ನಿರ್ಧಾರದಂತೆ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಬಂಟ್ವಾಳ ವಲಯ ಇಬಾದ್ ಚೆಯರ್‍ಮೆನ್ ಖಲೀಲ್ ದಾರಿಮಿ ಉದ್ಘಾಟಿಸಿದರು. ಅಬ್ದುಲ್ ಖಾದರ್ ಮದನಿ ದುಆ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೊ ಅಧ್ಯಕ್ಷತೆ ವಹಿಸಿದ್ದರು.
ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಖತೀಬ್ ಅಬ್ದುಲ್ ರಶೀದ್ ಯಮಾನಿ ತಹಜ್ಜುದ್ ನಮಾಝ್ ವಿಶೇಷತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ತರಗತಿ ಮಂಡಿಸಿದರು. ಶಾಖಾ ಉಪಾಧ್ಯಕ್ಷ ಮಜೀದ್ ಬೋಳಂಗಡಿ, ಕೋಶಾಧಿಕಾರಿ ಇಸ್ಹಾಕ್ ಫ್ಯಾಶನ್ ವೇರ್, ಪದಾಧಿಕಾರಿಗಳಾದ ಪಿ.ಬಿ. ಅಹಮದ್ ಹಾಜಿ, ಹಾಜಿ ಅಬೂಬಕರ್ ಎನ್.ಬಿ., ರಫೀಕ್ ಇನೋಳಿ, ಅಬ್ದುಲ್ ಜಬ್ಬಾರ್ ಬುರ್ಖಾ ಮೊದಲಾದವರು ಭಾಗವಹಿಸಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ಬಶೀರ್ ಬೇಕರಿ ವಂದಿಸಿ, ಅಬ್ದುಲ್ ಅಝೀಝ್ ಪಿ.ಐ. ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment