ಮಂಗಳೂರು, ಸೆ. 18, 2020 (ಕರಾವಳಿ ಟೈಮ್ಸ್) : ಕೊರೊನಾ ರೋಗದಿಂದಾಗಿ ಕೆಲಸ ಕಳೆದುಕೊಂಡು ಕಾರಣಾಂತರಗಳಿಂದಾಗಿ ಸೌದಿ ಅರೇಬಿಯಾದ ಜಿದ್ದಾ ಸುಮೇಶಿ ಜೈಲಿನಲ್ಲಿ ಬಂಧಿಯಾಗಿರುವ ಸುಮಾರು 450 ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಎಐಎಂಡಿಎಫ್ ಅಧ್ಯಕ್ಷ ಶಕೀಲ್ ಹಸನ್ ಹಾಗೂ ರಾಷ್ಟ್ರೀಯ ವಕ್ತಾರ ಮುಝಫ್ಫರ್ ಶೇಕ್ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಇಲಾಖಾ ಸಚಿವ ಡಾ. ಎಸ್. ಜೈ ಶಂಕರ್ ಹಾಗೂ ಸೌದಿ ಅರೇಬಿಯಾದಲ್ಲಿರುವ ಭಾರತದ ಕಾನ್ಸುಲ್ ಜನರಲ್ ನೂರ್ ರಹ್ಮಾನ್ ಶೇಖ್ ಅವರನ್ನು ಪತ್ರ ವ್ಯವಹಾರ ನಡೆಸುವ ಮೂಲಕ ಒತ್ತಾಯಿಸಿದ್ದಾರೆ.
ಲೆಬನಾನ್ ಸುಡಾನಿ ಮುಂತಾದ ದೇಶದ ಪ್ರಜೆಗಳನ್ನು ಈಗಾಗಲೇ ಸೌದಿ ಅರೇಬಿಯಾದ ಜೈಲುಗಳಿಂದ ಅವರಿಗೆ ಸಂಬಂಧಿಸಿದ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಭಾರತದ ಸುಮಾರು 450 ಪ್ರಜೆಗಳು ಇನ್ನೂ ನ್ಯಾಯದ ನಿರೀಕ್ಷೆಯಲ್ಲಿ ಜೈಲಿನಲ್ಲೇ ಬಂಧಿಯಾಗಿದ್ದಾರೆ. ಎಐಎಂಡಿಎಫ್ ಸಂಘಟನೆಯ ನಾಯಕರು ಸೌದಿಯಲ್ಲಿರುವ ಭಾರತೀಯ ರಾಯಭಾರಿ ಹಾಗೂ ಪಿಎಂಒ ಮತ್ತು ವಿದೇಶಾಂಗ ಇಲಾಖೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರ ಬಿಡುಗಡೆಗಾಗಿ ಶ್ರಮಿಸುತ್ತಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಫೆÇೀರಂನ ರಾಜ್ಯ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ತಿಳಿಸಿದ್ದಾರೆ. ಸಂಸ್ಥೆ ನಡೆಸಿದ ಪತ್ರ ವ್ಯವಹಾರಗಳಿಗೆ ಇಲಾಖಾಧಿಕಾರಿಗಳು ಸ್ಪಂದಿಸಿದ್ದು, ಪೂರಕ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ಬಂಧಿತ ಭಾರತೀಯರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದವರು ಆಶಯ ವ್ಯಕ್ತಪಡಿಸಿದ್ದಾರೆ.
0 comments:
Post a Comment