ಕರೋಪಾಡಿ : 7.5 ಕೋಟಿ ವೆಚ್ಚದ ಅಭಿವೃದ್ದಿಗೆ ಕಾಮಗಾರಿಗಳಿಗೆ ಶಾಸಕ ನಾಯಕ್ ಚಾಲನೆ - Karavali Times ಕರೋಪಾಡಿ : 7.5 ಕೋಟಿ ವೆಚ್ಚದ ಅಭಿವೃದ್ದಿಗೆ ಕಾಮಗಾರಿಗಳಿಗೆ ಶಾಸಕ ನಾಯಕ್ ಚಾಲನೆ - Karavali Times

728x90

14 September 2020

ಕರೋಪಾಡಿ : 7.5 ಕೋಟಿ ವೆಚ್ಚದ ಅಭಿವೃದ್ದಿಗೆ ಕಾಮಗಾರಿಗಳಿಗೆ ಶಾಸಕ ನಾಯಕ್ ಚಾಲನೆ





ಬಂಟ್ವಾಳ ಸೆ. 14, 2020 (ಕರಾವಳಿ ಟೈಮ್ಸ್) : ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 7.5 ಕೋಟಿ ರೂಪಾಯಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಸೋಮವಾರ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದರು. 

ಈ ಸಂದರ್ಭ ಗುರುದೇವದತ್ತ ಸಂಸ್ಥಾನಮ್ ಒಡಿಯೂರು  ಕ್ಷೇತ್ರ  ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿದರು. ಕರೋಪಾಡಿ ಗ್ರಾ.ಪಂ. ವ್ಯಾಪ್ತಿಯ 2.25 ಕೋಟಿ ವೆಚ್ಚದಲ್ಲಿ ಪಳ್ಳದಕೋಡಿ, ಪದ್ಯಾಣ ರಸ್ತೆ, 60, ಲಕ್ಷ ವೆಚ್ಚದಲ್ಲಿ ಅರಸಳಿಕೆ, ವಗೆನಾಡು ರಸ್ತೆ ಮರು ಡಾಮರಿಕರಣ, 75 ಲಕ್ಷ ವೆಚ್ಚದಲ್ಲಿ ಶ್ರೀ ಜಲ ದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು, ಆನೆಕಲ್ಲು ಬಳಿ ನದಿಗೆ ತಡೆಗೋಡೆ, 10 ಲಕ್ಷ ವೆಚ್ಚದಲ್ಲಿ ಪಾಲಿಗೆ, ನಲಿಕೆ ಕಾಲೋನಿ ರಸ್ತೆ ಕಾಂಕ್ರೀಟಿಕರಣ, 15 ಲಕ್ಷ ವೆಚ್ಚದಲ್ಲಿ ಚೆಲ್ಲಂಗಾರು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ, 5 ಲಕ್ಷ ವೆಚ್ಚದಲ್ಲಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಮುಂಭಾಗದಲ್ಲಿ ಒಳಚರಂಡಿ ರಚನೆ, 5 ಲಕ್ಷ ವೆಚ್ಚದಲ್ಲಿ ಒಡಿಯೂರು, ಬನಾರಿ ಸಂಪರ್ಕ ರಸ್ತೆ, 30 ಲಕ್ಷ ವೆಚ್ಚದಲ್ಲಿ ಪಾದೆಕಲ್ಲು ಪೆರ್ವೋಡಿ ಸಂಪರ್ಕ ರಸ್ತೆ, 10 ಲಕ್ಷ ವೆಚ್ಚದಲ್ಲಿ ವಗೆನಾಡು, ಪಂಭತ್ತಾಜೆ ರಸ್ತೆ, 5 ಲಕ್ಷ ವೆಚ್ಚದಲ್ಲಿ ದೇವಸ್ಯ, ಪಟ್ಲ, ಪರಂದರಮೂಲೆ ರಸ್ತೆ, 1.25 ಲಕ್ಷ ವೆಚ್ಚದಲ್ಲಿ ಕುಡ್ಪಲ್ತಡ್ಕ ಹೈಮಾಸ್ಟ್ ದೀಪ, 1.25 ಲಕ್ಷ ವೆಚ್ಚದಲ್ಲಿ ಬೆಂಗದಪಡ್ಪು ಹೈಮಾಸ್ಟ್ ದೀಪ ಉದ್ಘಾಟನೆ, 1.25 ಲಕ್ಷ ವೆಚ್ಚದಲ್ಲಿ ಒಡಿಯೂರು, ಶ್ರೀ ಗುರುದೇವ್ ದತ್ತ ಸಂಸ್ಥಾನ ಹೈಮಾಸ್ಟ್, 1.25 ಲಕ್ಷ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರ, ಬೇಡಗುಡ್ಡೆ ರಸ್ತೆಯ ಉದ್ಘಾಟನೆ ನಡೆಯಿತು. 

ಅನುದಾನ ಬಿಡುಗಡೆ ಆಗಿ ಪ್ರಗತಿಯಲ್ಲಿ ಇರುವ ಕಾಮಗಾರಿಗಳಾದ 1 ಕೋಟಿ ವೆಚ್ಚದಲ್ಲಿ ಕಮ್ಮಾಜೆಯಿಂದ ಶ್ರೀ ಗುರುದೇವ ಸಂಸ್ಥಾನ ಒಡಿಯೂರು ರಸ್ತೆ, 1ಕೋಟಿ ವೆಚ್ಚದಲ್ಲಿ ಬೇತಾ, ಮುಗುಳಿ ರಸ್ತೆ ಕಾಂಕ್ರೀಟಿಕರಣ, 30 ಲಕ್ಷ ವೆಚ್ಚದಲ್ಲಿ ಪದ್ಯಾಣ ಗಡಿಜಾಗೆ ಕಲ್ಲುರ್ಟಿ ದೈವಸ್ಥಾನ ರಸ್ತೆ, 10 ಲಕ್ಷ ವೆಚ್ಚದಲ್ಲಿ ಬೇತಾ, ಪಾದೆಕಲ್ಲು ರಸ್ತೆಗೆ ಶಿಲಾನ್ಯಾಸವನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು. 

ಈ ಸಂದರ್ಭ ಬುಡಾ ಅಧ್ಯಕ್ಷ ಬಿ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಕರೋಪಾಡಿ ಗ್ರಾಮ ಪಂಚಾಯತ್ ಮಾಜಿ ಆಧ್ಯಕ್ಷೆ ಬೇಬಿ ಆರ್ ಶೆಟ್ಟಿ, ಸಾಲೆತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಚಂದ್ರವಾತಿ ಮಲಾರ್, ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಮನಾಯ್ಕ್, ಜಲದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲಕೃಷ್ಣ ಭಟ್ ಬೇತ, ರೈತ ಮೋರ್ಚಾ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಅಗರಿ, ಕನ್ಯಾನ ಗ್ರಾ.ಪಂ. ಮಾಜಿ ಅಧ್ಯಕ್ಷ ರಘರಾಮ ಶೆಟ್ಟಿ ಕನ್ಯಾನ, ಜಿ.ಪಂ. ಮಾಜಿ ಸದಸ್ಯ ಲಿಂಗಪ್ಪ ಗೌಡ, ಕರೋಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ  ವಿಘ್ನೇಶ್ವರ ಭಟ್, ಉಪಾಧ್ಯಕ್ಷ ಪಟ್ಲ ರಘನಾಥ ಶೆಟ್ಟಿ, ಪ್ರಮುಖರಾದ ಜಯರಾಮ್ ಮಿತ್ತನಡ್ಕ, ಲಕ್ಷಣ ಮಾಂಬಾಡಿ, ಆಶ್ವತ್ ಶೆಟ್ಟಿ, ಶಶಿಕಿರಣ್ ಶೆಟ್ಟಿ, ಸುನಿಲ್ ಪದ್ಯಾಣ, ರಂಜಿತ್ ಪಾಲಿಗೆ, ಆದರ್ಶ ಶೆಟ್ಟಿ ಪಟ್ಲ, ಜಯರಾಮ ನಾಯ್ಕ, ರಾಮಕೃಷ್ಣ ಮಲಾರ್, ರಾಜೇಶ್ ಮಿತ್ತನಡ್ಕ, ದಾಮೋದರ ಶೆಟ್ಟಿ, ಸಂಕಪ್ಪ ಶೆಟ್ಟಿ ಪಲ್ಲದಕೋಡಿ, ದಿನೇಶ್ ಮಿತ್ತನಡ್ಕ, ರಾಜೇಶ್ ಮಿತ್ತನಡ್ಕ, ಸುದರ್ಶನ ಆಳ್ವ, ವಿನೋದ್ ಶೆಟ್ಟಿ ಪಟ್ಲ, ಪುರಂದರ ಚೆಲ್ಲಂಗಾರ್, ಬಾಲಕೃಷ್ಣ ಚೆಲ್ಲಂಗಾರ್, ಶಾರದ ಚೆಲ್ಲಂಗಾರ್ ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಬಾಲಕೃಷ್ಣ ಸೆರ್ಕಳ, ವಿದ್ಯೇಶ್ ರೈ ಸಾಲೆತ್ತೂರು, ವಿಕ್ಟರ್, ಲೋಕೋಪಯೋಗಿ ಇಲಾಖೆ ಹಿರಿಯ ವಿಭಾಗದ ಇಂಜಿನಿಯರ್ ಷಣ್ಮುಗಂ, ಕಿರಿಯ ವಿಭಾಗದ ಇಂಜಿನಿಯರ್ ಪ್ರೀತಂ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಶಿವಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು. ಕೊಳ್ನಾಡು ಮಹಾ ಶಕ್ತಿ ಕೇಂದ್ರ ಆದ್ಯಕ್ಷ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು.










  • Blogger Comments
  • Facebook Comments

0 comments:

Post a Comment

Item Reviewed: ಕರೋಪಾಡಿ : 7.5 ಕೋಟಿ ವೆಚ್ಚದ ಅಭಿವೃದ್ದಿಗೆ ಕಾಮಗಾರಿಗಳಿಗೆ ಶಾಸಕ ನಾಯಕ್ ಚಾಲನೆ Rating: 5 Reviewed By: karavali Times
Scroll to Top