ನವದೆಹಲಿ (ಕರಾವಳಿ ಟೈಮ್ಸ್) : ಭಾರತದ ಗಡಿಯಲ್ಲಿ ಕಿರಿಕ್ ಮುಂದುವರಿಸಿರುವ ಚೀನಾಗೆ ಪಾಠ ಕಲಿಸುವ ನಿಟ್ಟಿನಲ್ಲಿ ಭಾರತ ಮತ್ತೆ ಡಿಜಿಟಲ್ ಆಘಾತ ನೀಡಿದ್ದು, 117 ಚೀನಾ ಅಪ್ಲಿಕೇಶನ್ ಜೊತೆ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್‍ಜಿಯನ್ನು ಕೂಡಾ ನಿಷೇಧಿಸಿದೆ.
ಕೇಂದ್ರ ಸರಕಾರ ಈ ಬಗ್ಗೆ ಮೂರನೇ ಬಾರಿಗೆ ನಿರ್ಧಾರ ಕೈಗೊಂಡಿದ್ದು, ದಕ್ಷಿಣ ಕೊರಿಯಾ ಕಂಪೆನಿ ಅಭಿವೃದ್ಧಿ ಪಡಿಸಿದ ಮೊಬೈಲ್ ಗೇಮಿಂಗ್ ಆಪ್ ಪಬ್‍ಜಿಯನ್ನೂ ನಿಷೇಧಿಸಿದೆ. ಪಬ್‍ಜಿ ಗೇಮಿಂಗ್ ಆಪನ್ನು ನಿಷೇಧಿಸುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಹಿಂದೆಯೇ ಬಹಳಷ್ಟು ಒತ್ತಾಯಗಳು ಕೇಳಿ ಬಂದಿತ್ತು. ಮಕ್ಕಳ ಮೆದುಳಿನ ಮೇಲೆ ಈ ಗೇಮಿಂಗ್ ಆಪ್ ಗಂಭೀರ ಅಡ್ಡ ಪರಿಣಾಮ ಬೀರುತ್ತದೆ. ಯುವ ಜನತೆ ಇದರ ಚಟಕ್ಕೆ ಬಿದ್ದು ಬಾಲ್ಯಾವಸ್ಥೆಯನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದಡಿ ಈ ಆಪ್ ನಿಷೇಧಿಸಲು ಜನ ಆಗ್ರಹಿಸಿದ್ದರು.
ಗಲ್ವಾನ್ ಘರ್ಷಣೆಯ ಬಳಿಕ ಟಿಕ್‍ಟಾಕ್ ಸೇರಿದಂತೆ 59 ಅಪ್ಲಿಕೇಶನ್‍ಗಳನ್ನು ಭಾರತ ನಿಷೇಧಿಸಿತ್ತು. ಇದಾದ ಬಳಿಕ ಮತ್ತೆ 47 ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು. ಒಟ್ಟು 250 ಚೀನಿ ಅಪ್ಲಿಕೇಶನ್‍ಗಳ ಮೇಲೆ ಭಾರತ ನಿಗಾ ಇಟ್ಟಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಮತ್ತು ಪ್ರಜೆಗಳ ಖಾಸಗಿತನವನ್ನು ದುರುಪಯೋUಮಾಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಅಪ್ಲಿಕೇಶನ್‍ಗಳ ಮೇಲೆ ಕ್ರಮ ಕೈಗೊಂಡಿದೆ.
0 comments:
Post a Comment