ವಿಟ್ಲ (ಕರಾವಳಿ ಟೈಮ್ಸ್) : ಡಿ.ವೈ.ಎಫ್.ಐ. ವಿಟ್ಲ ವಲಯ ಸಮಿತಿ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ವಿಟ್ಲ ಡಿ.ವೈ.ಎಫ್.ಐ ಕಚೇರಿ ಮುಂಭಾಗ ಶನಿವಾರ ನಡೆಯಿತು,
ಉದ್ಯಮಿ ವೆಂಕಟೇಶ್ ಭಟ್ ದ್ವಜಾರೋಹಣಗೈದರು. ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರಾಜಾ ಚೆಂಡ್ತಿಮಾರ್, ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ನ್ಯಾಯವಾದಿ ತುಳಸೀದಾಸ್ ವಿಟ್ಲ, ಡಿ.ವೈ.ಎಫ್.ಐ ವಿಟ್ಲ ವಲಯಾಧ್ಯಕ್ಷ ನುಜಮ್ ಅಳಿಕೆ, ಕಾರ್ಯದರ್ಶಿ ಜಮೀಲ್ ಎಂ., ಉಪಾಧ್ಯಕ್ಷ ಸಲ್ಮಾನ್ ಪಿ.ಬಿ., ಪ್ರಮುಖರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ರಾಜೇಶ್ ಭಟ್, ದೇಜಪ್ಪ ಪೂಜಾರಿ, ರಾಜೀವ ಕೆ ಕೋಟ್ಯಾನ್, ಆರೀಫ್ ಬಿ.ಕೆ., ರಾಘವೇಂದ್ರ, ಸಲೀಂ ಮಲಿಕ್, ಮಹಮ್ಮದಾಲಿ ಮದಕ, ಇರ್ಫಾನ್ ಒಕ್ಕೆತ್ತೂರು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment