ಬಂಟ್ವಾಳ (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಉಪ್ಪುಗುಡ್ಡೆ ಪ್ರದೇಶದಲ್ಲಿ ತಾ ಪಂ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಅವರ 15ನೇ ಹಣಕಾಸು ಯೋಜನೆಯಲ್ಲಿ 2 ಲಕ್ಷ ರೂಪಾಯಿ ಹಾಗೂ ಗ್ರಾ ಪಂ ಸದಸ್ಯರಾದ ರವೀಂದ್ರ ಸಪಲ್ಯ ಹಾಗೂ ಚಂದ್ರಾವತಿ ರತ್ನಾಕರ ನಾಯ್ಕ ಅವರ 15ನೇ ಹಣಕಾಸು ಯೋಜನೆಯಡಿ 1 ಲಕ್ಷ ರೂಪಾಯಿ ಅನುದಾನದಲ್ಲಿ ಕಾಲು ದಾರಿ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ ಭಾನುವಾರ ಶಿಲಾನ್ಯಾಸ ನೆರವೇರಿಸಿದರು.
ಇದೇ ವೇಳೆ 14ನೇ ಹಣಕಾಸು ಯೋಜನೆಯ 1.70 ಲಕ್ಷ ರೂಪಾಯಿ ವೆಚ್ಚದ ಇದೇ ಪರಿಸರದ ಮಹಮ್ಮದ್ ಬಶೀರ್ ಮನೆ ಬಳಿ ನಿರ್ಮಾಣಗೊಂಡ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನು ರಮಾನಾಥ ರೈ ಉದ್ಘಾಟಿಸಿದರು.
ಈ ಸಂದರ್ಭ ತಾ.ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ನರಿಕೊಂಬು ಗ್ರಾ.ಪಂ. ಸದಸ್ಯರಾದ ಮಾಧವ ಕರ್ಬೆಟ್ಟು, ರವೀಂದ್ರ ಸಪಲ್ಯ, ಚಂದ್ರಾವತಿ ರತ್ನಾಕರ ನಾಯ್ಕ, ಬೂತ್ ಅಧ್ಯಕ್ಷ ಅಬೂಬಕ್ಕರ್ ಉಪ್ಪುಗುಡ್ಡೆ, ಪ್ರಮುಖರಾದ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಅಹಮದ್ ಬಾವಾ, ಹಾಮದ್ ಹಾಜಿ, ಇಸ್ಮಾಯಿಲ್ ಆಲಡ್ಕ, ಇಸ್ಮಾಯಿಲ್ ಉಪ್ಪುಗುಡ್ಡೆ, ಅರುಣ್ ಶೆಟ್ಟಿ ಅಂತರ, ಹರೀಶ್ ಕೆ., ಗುತ್ತಿಗೆದಾರ ಹಾಜಿ ಪಿ.ಎಸ್. ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment