ನವದೆಹಲಿ (ಕರಾವಳಿ ಟೈಮ್ಸ್) : ಹಬ್ಬ, ಉತ್ಸವಗಳ ಸೀಝನ್ ಬಂದಿದೆ. ಹಬ್ಬ-ಉತ್ಸವಗಳ ಆಚರಣೆಯ, ಸಂಭ್ರಮಗಳ ಹೆಸರಿನಲ್ಲಿ ಕೊರೋನಾ ವೈರಸ್ ಜಾಗೃತಿಯನ್ನು ಮರೆಯದಿರಿ. ಜನ ಈ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ರೇಡಿಯೋ ಆಕಾಶವಾಣಿ ಮೂಲಕ ತಿಂಗಳ ಕೊನೆಯ ಭಾನುವಾರದ ಮನ್‍ಕಿಬಾತ್ ಆಡಿದ ಅವರು ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಅಂದರೆ 78 ಸಾವಿರ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 35 ಲಕ್ಷ ಗಟಿ ದಾಟಿದೆ. ಬ್ರೆಝಿಲ್ ದೇಶದಲ್ಲಿ 38 ಲಕ್ಷ ಸೋಂಕಿತರಿದ್ದು ಅದಕ್ಕೆ ಹತ್ತಿರದಲ್ಲಿಯೇ ನಮ್ಮ ದೇಶ ಇದೆ. ಕೊರೋನಾ ವೈರಸ್ ಹಾಗೂ ಲಾಕ್‍ಡೌನ್ ಜಾರಿಯಾದ ನಂತರ ಜನರಲ್ಲಿ ಶಿಸ್ತಿನ ಪ್ರಜ್ಞೆ ಹೆಚ್ಚಾಗಿದೆ. ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿ ಎಂದವರು ದೇಶವಾಸಿಗಳಿಗೆ ಸಲಹೆ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಹಬ್ಬ-ಹರಿದಿನಗಳು ಹೆಚ್ಚಾಗುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಜನರಲ್ಲಿ ಶಿಸ್ತಿನ ಭಾವನೆ ಹೆಚ್ಚಾಗುತ್ತಿದೆ, ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿ. ಜನರು ಮುಂಜಾಗ್ರತೆ, ಸುರಕ್ಷತೆ ಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಈ ವೈರಸ್ಸನ್ನು ನಾವು ಗೆಲ್ಲಬಹುದು. 2 ಮೀಟರ್ ಅಂತರವನ್ನು ಕಡ್ಡಾಯವಾಗಿ ಪಾಲಿಸಿ ಎಂದರು.
ಇಂದು ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಂಶೋಧನೆ, ಹೊಸದನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು ಒಟ್ಟಾಗಿ ಸೇರಿ ಹೊಸದನ್ನು ಶೋಧಿಸುತ್ತಾರೆ. ಸಂಶೋಧನೆ, ಪರಿಹಾರದಲ್ಲಿ ಭಾರತೀಯರ ಸಾಮರ್ಥ್ಯ ಪ್ರತಿಯೊಬ್ಬರಿಗೂ ಗೊತ್ತಿದೆ. ಜನರಲ್ಲಿ ನಿಷ್ಠೆ, ಶ್ರದ್ಧೆ, ಶಕ್ತಿ ಸಾಕಷ್ಟಿದೆ ಎಂದ ಪ್ರಧಾನಿ ಮೋದಿ ಆತ್ಮನಿರ್ಭರ ಆಪ್‍ನಲ್ಲಿ ಸಂಶೋಧನಾ ಸವಾಲಿದ್ದು ಕುಟುಕಿಡ್ಸ್ ಕಲಿಕೆ ಆಪ್ ಇದೆ. ಇದು ಸಂವಹನಾತ್ಮಕ ಆಪ್ ಆಗಿದ್ದು ಈ ಮೂಲಕ ಮಕ್ಕಳು ಗಣಿತ, ವಿಜ್ಞಾನ ವಿಷಯಗಳನ್ನು ಹಾಡು, ಕಥೆಗಳ ಮೂಲಕ ಸುಲಭವಾಗಿ ಆಸಕ್ತಿಕರವಾಗಿ ಕಲಿಯಬಹುದು. ಸ್ಟೆಪ್ ಸೆಟ್ ಗೊ ಎನ್ನುವ ಮತ್ತೊಂದು ಆಪ್ ಇದ್ದು, ಇದು ಫಿಟ್‍ನೆಸ್ ಆಪ್ ಆಗಿದೆ. ನೀವು ಎಷ್ಟು ನಡೆದಿದ್ದೀರಿ, ಎಷ್ಟು ಕ್ಯಾಲರಿ ಕಳೆದುಕೊಂಡಿದ್ದೀರಿ ಎಂದು ತೋರಿಸುತ್ತದೆ. ನೀವು ಆರೋಗ್ಯವಾಗಿ, ಸದೃಢವಾಗಿ ಇರಲು ಈ ಆಪ್ ಉತ್ತೇಜನ ನೀಡುತ್ತದೆ ಎಂದರು.
ಹಲವು ಉದ್ಯಮ ಆಪ್ ಗಳಿವೆ. ಈಕ್ವಲ್ ಟು, ಬುಕ್ಸ್ ಅಂಡ್ ಎಕ್ಸ್ ಪೆನ್ಸ್, ಜೊಹೊ ವರ್ಕ್ ಪ್ಲೇಸ್, ಎಫ್‍ಟಿಸಿ ಟಾಲೆಂಟ್ ಇತ್ಯಾದಿ. ಅವುಗಳನ್ನು ನೆಟ್‍ನಲ್ಲಿ ಹುಡುಕಿ ಅದರಲ್ಲಿ ಸಾಕಷ್ಟು ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮಗೆ ಸಿಗುತ್ತವೆ ಎಂದು ಪ್ರಧಾನಿ ಹೇಳಿದರು.
ಭಾರತೀಯ ತಳಿ ನಾಯಿಗಳು ತುಂಬಾ ದಕ್ಷವಾಗಿ, ಚುರುಕಾರಿ ಇರುತ್ತದೆ. ಅವುಗಳನ್ನು ಸಾಕಿ, ಬೆಳೆಸಲು ಬೇರೆ ನಾಯಿಗಳಿಗೆ ಹೋಲಿಸಿದರೆ ಖರ್ಚು ಕಡಿಮೆ. ಭಾರತದ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ. ನಮ್ಮ ಸೇನೆಯಲ್ಲಿ ಕೂಡ ಅವುಗಳಿಗೆ ತರಬೇತಿ ನೀಡಿ ನಾಯಿಗಳ ದಳಗಳನ್ನು ಬೆಳೆಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
0 comments:
Post a Comment