ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಬಡಗಕಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ಮಾಜಿ ಸಚಿವ ಬಿ ರಮಾನಾಥ ರೈ ನಿರ್ದೆಶನದಂತೆ ಇತ್ತೀಚೆಗೆ ಪಾಂಡವರಕಲ್ಲು ಸಮುದಾಯ ಭವನದಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ವರ್ದಿಸುವ ಸದ್ಯಸರ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯರೂಪಿಸುವ ಮಖಾಂತರ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರುಗಳಾದ ಬಿ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಸಂಪತ್ ಕುಮಾರ್ ಶೆಟ್ಟಿ, ಜಗದೀಶ್ ಕೊಯಿಲ, ಜನಾರ್ದನ ಚೆಂಡ್ತಿಮಾರ್, ಎಪ್ರೀಯಂ ಸಿಕ್ವೇರಾ, ಮಹಮ್ಮದ್ ಸಂಗಬೆಟ್ಟು, ವಲಯ ಕಾಂಗ್ರೆಸ್ ಅಧ್ಯಕ್ಷ ಜಯ ಬಂಗೇರ, ಪಕ್ಷ ಪ್ರಮುಖರಾದ ಡೀಕಯ್ಯ ಬಂಗೇರ ಕರ್ಲ, ಸತೀಶ್ ಚಂದ್ರ ಕೆ ಎ, ವಸಂತ ಪೂಜಾರಿ, ಅಬ್ದುಲ್ಲಾ ಅಂಗಡಿ, ಕೇಶವ ಮಜಲು, ವಿರೇಂದ್ರ ಜೈನ್, ಆನಂದ ಕರ್ಲ, ದಿವಾಕರ್ ಕರ್ಲ, ವಿಶ್ವನಾಥ ಪೂಜಾರಿ ಕುತ್ತಾಡಿ, ಅಬೂಬಕ್ಕರ್ ಕೆದಿಲೆ, ಸುದಾಕರ್ ಶೆಣೈ ಕಂಡಿಗ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment