ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳ ಘೋಷಣೆ ಹಾಗೂ ಕಾರ್ಯಕಾರಣಿ ಸಭೆಯು ಬಿ.ಸಿ.ರೋಡು ಪಕ್ಷದ ಕಛೇರಿಯಲ್ಲಿ ನಡೆಯಿತು. ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಕಾರ್ಯಕಾರಣಿ ಸಭೆ ಉದ್ಛಾಟಿಸಿದರು. ಸಭೆಯಲ್ಲಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆ ಭಾರತಿ ಎಸ್. ಚೌಟ, ಪ್ರಧಾನ ಕಾರ್ಯದರ್ಶಿಗಳಾದ ಸೀಮಾ ಮಾಧವ, ಶ್ರೀಲತಾ ಶೆಟ್ಟಿ, ಕರ್ನಾಟಕ ರಾಜ್ಯ ನೀರು ಸರಬರಾಜು ಯೋಜನೆ ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಕಿ ಸುಲೋಚನ ಜಿ.ಕೆ. ಭಟ್, ಜಿಲ್ಲಾ ಪ್ರಮುಖರಾದ ಪೂಜಾ ಪೈ, ಮಂದಾರತಿ ಶೆಟ್ಟಿ, ಸೇವಂತಿ ಶ್ರೀಯಾನ್, ರೂಪ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕಾಲು ಬೆರಳುಗಳ ಮೂಲಕ ಪರೀಕ್ಷೆ ಬರೆದು ಗಮನ ಸೆಳೆದಿದ್ದ ಕಂಚಿಕಾರ ಪೇಟೆ ನಿವಾಸಿ ವಿದ್ಯಾರ್ಥಿ ಕೌಶಿಕ್ ಹಾಗೂ ಕರ್ನಾಟಕ ರಾಜ್ಯ ನೀರು ಸರಬರಾಜು ಯೋಜನೆ ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿಯಾಗಿ ನೇಮಕಗೊಂಡ ಸುಲೋಚನ ಜಿ.ಕೆ. ಭಟ್ ಅವರನ್ನು ಅಭಿನಂದಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸೀಮಾ ಮಾಧವ ಸ್ವಾಗತಿಸಿ, ಶ್ರೀಲತಾ ಶೆಟ್ಟಿ ವಂದಿಸಿದರು. ಮಾಣಿಮಾಲಾ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಉಪಾಧ್ಯಕ್ಷ ಚಿದಾನಂದ ರೈ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು.
0 comments:
Post a Comment