ನವದೆಹಲಿ (ಕರಾವಳಿ ಟೈಮ್ಸ್) : ಕೋವಿಡ್-19 ಪ್ರಯುಕ್ತ ದೇಶದಲ್ಲಿ ಹೇರಲಾಗಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೋಟಾರು ವಾಹನಗಳ ದಾಖಲೆಗಳ ಸಿಂಧುತ್ವವನ್ನು ಡಿಸೆಂಬರ್ ತಿಂಗಳ ಅಂತ್ಯದವರೆಗೆ ವಿಸ್ತರಣೆ ಮಾಡಲು ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ಮೋಟಾರು ವಾಹನಗಳ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರ್ ವಾಹನಗಳ ನಿಯಮಾವಳಿ, 1989 ಫಿಟ್ನೆಸ್, ಪರ್ಮಿಟ್, ಪರವಾನಗಿ, ನೋಂದಣಿ ಹಾಗೂ ಇತರ ದಾಖಲಾತಿಗಳ ಸಿಂಧುತ್ವವನ್ನು ಡಿ. 31 ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದಕ್ಕೂ ಮುನ್ನ ಮಾ. 30 ಹಾಗೂ ಜೂ. 9 ರಂದು ದಾಖಲೆಗಳ ಸಿಂಧುತ್ವದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು.
ಫೆ. 1 ರಿಂದ ಕೊನೆಗೊಳ್ಳಲಿದ್ದ ಸಿಂಧುತ್ವಕ್ಕೆ ಈ ವಿಸ್ತರಣೆಯ ಆದೇಶ ಅನ್ವಯವಾಗಲಿದೆ, ಅಧಿಕಾರಿಗಳು ಫೆ. 1ಕ್ಕೆ ಕೊನೆಗೊಳ್ಳಲಿದ್ದ ದಾಖಲೆಗಳ ಸಿಂಧುತ್ವವನ್ನು ಡಿ. 31 ವರೆಗೆ ಪರಿಗಣಿಸಬೇಕು ಎಂದು ಸಚಿವಾಲಯ ತಿಳಿಸಿದೆ.
0 comments:
Post a Comment