ಬಂಟ್ವಾಳ (ಕರಾವಳಿ ಟೈಮ್ಸ್) : ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಧ್ವಜಾರೋಹಣಗೈದರು. ಖತೀಬ್ ಅಬ್ಬಾಸ್ ದಾರಿಮಿ ದುವಾಶೀರ್ವಚನಗೈದರು.
ಪ್ರಮುಖರಾದ ಮಜೀದ್ ಪರಂಗಿಪೇಟೆ, ಅಬೂಬಕ್ಕರ್, ನಝೀರ್ ಪರಂಗಿಪೇಟೆ, ಹನೀಪ್ ಕುಂಜತ್ಕಲ, ಸುಲೈಮಾನ್, ಅದ್ದ ಉಸ್ತಾದ್, ಬಶೀರ್ ಮೊದಲಾದವರು ಭಾಗವಹಿಸಿದ್ದರು.
ಪುದು ಮಾಪ್ಳ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
ಫರಂಗಿಪೇಟೆಯ ಪುದು ಮಾಪ್ಲ ಸರಕಾರಿ ಹಿರಿಯ ಶಾಲೆಯಲ್ಲಿ ದೇಶದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಮ್ಲಾನ್ ಕುಂಪನಮಜಲು ಧ್ವಜಾರೋಹಣಗೈದರು. ಜಿ.ಪಂ. ಮಾಜಿ ಸದಸ್ಯ, ಟುಡೇ ಫೌಂಡೇಶನ್ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ, ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾ ಉಳ್ಳಾಲ್, ಶಿಕ್ಷಕಿರಾದ ಸುನಿತ, ಜ್ಯೋತಿ, ಶಾಲೆಟ್, ವಿಜೇತ, ಅಶ್ವಿತಾ, ಪ್ರಭ, ಪ್ರಮುಖರಾದ ಅಬೂಬಕ್ಕರ್ ಫರಂಗಿಪೇಟೆ, ಮಜೀದ್ ಫರಂಗಿಪೇಟೆ, ಮೊದಲಾದವರು ಭಾಗವಹಿಸಿದ್ದರು.
ಮಾರಿಪಳ್ಳ ರೇಸ್ಕೋ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯೋತ್ಸವ
ಮಾರಿಪಳ್ಳ ರೇಸ್ಕೋ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ರಾಷ್ಟ್ರಿಯ ಹೆದ್ದಾರಿ ಪಕ್ಕದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಜಬ್ಬಾರ್ ಮಾರಿಪಳ್ಳ ಧ್ವಜಾರೋಹಣಗೈದರು. ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಫರಂಗಿಪೇಟೆ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕ್, ಪಂಚಾಯತ್ ಉಪಾಧ್ಯಕ್ಷೆ ಲೀಡಿಯಾ ಪಿಂಟೋ, ಸದಸ್ಯರಾದ ಇಕ್ಬಾಲ್ ಸುಜೀರ್, ಹುಸೈನ್ ಪಾಡಿ, ಮಾರಿಪಳ್ಳ ಜುಮಾ ಮಸೀದಿ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಬಿ.ಎಂ. ಪ್ರಮುಖರಾದ ಮುಹಮ್ಮದ್ ಮಾಸ್ಟರ್ ಕೆ.ಎಂ., ಅಶ್ರಫ್ ಮಲ್ಲಿ, ನಿಸಾರ್ ಮಾರಿಪಳ್ಳ, ಇಮ್ರಾನ್ ಮಾರಿಪಳ್ಳ, ಸಿದ್ದಿಕ್ ಸುಜೀರ್ ಗುಡ್ಡೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment