ವಿಟ್ಲ (ಕರಾವಳಿ ಟೈಮ್ಸ್) : ನೇರಳಕಟ್ಟೆ-ಗಣೇಶ ನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಗಣೇಶನಗರದಲ್ಲಿ ಆಚರಿಸಲಾಯಿತು.
ನೆಟ್ಲಮುಡ್ನೂರು ಗ್ರಾಮದ ಕೊರೋನ ವಾರಿಯರ್ಸ್, ಆಶಾ ಕಾರ್ಯಕರ್ತೆ ಮಮತಾ ಮೀನಾವು ದ್ವಜಾರೋಹಣಗೈದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅದ್ಯಕ್ಷ ಬೋಜನಾರಾಯಣ ಅದ್ಯಕ್ಷತೆ ವಹಿಸಿದ್ದರು. ಸಮಿತಿಯ ಮಾಜಿ ಗೌರವಾದ್ಯಕ್ಷ ಅನಂತ ಪ್ರಭು ಸಂದೇಶ ಭಾಷಣಗೈದರು. ನೇರಳಕಟ್ಟೆ-ಗಣೇಶ ನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ಬೇಬಿ ನಾಯ್ಕ್, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ, ನಿವೃತ ಮುಖ್ಯ ಶಿಕ್ಷಕರುಗಳಾದ ರಾಮಚಂದ್ರ ಮಾಸ್ಟರ್, ಲಕ್ಷ್ಮಿ ಟೀಚರ್, ಚಂದ್ರಶೇಖರ, ರಾಜೀವ ಬಿಂದು, ರಾಜೇಶ ಕರುವನ್, ಡಾ. ಗಣರಾಜ ಎಲ್ಕಣ, ರವಿ ನ್ಯಾಕ್, ಪ್ರಶಾಂತ, ಕಿರಣ್, ಶರತ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment