ಬಂಟ್ವಾಳ (ಕರಾವಳಿ ಟೈಮ್ಸ್) : ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ವತಿಯಿಂದ ದೇಶದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಸೀದಿ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಫೈಝಿ ಅಲ್-ಅಝ್ಹರಿ ಧ್ವಜಾರೋಹಣಗೈದರು.
ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸ ಸದರ್ ಮುಅಲ್ಲಿಂ ಬಿ.ಟಿ. ಇಕ್ಬಾಲ್ ದಾರಿಮಿ, ಕಲ್ಲಡ್ಕ ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್, ಸದಸ್ಯರಾದ ಅಬೂಬಕ್ಕರ್ ಮುರಬೈಲ್, ಜವಾಝ್ ಕಲ್ಲಡ್ಕ, ಖಾಸಿಂ ಕಲ್ಲಡ್ಕ, ನವಾಝ್ ಕೆ.ಎನ್. ಮೊದಲಾದವರು ಭಾಗವಹಿಸಿದ್ದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment