ಬಂಟ್ವಾಳ (ಕರಾವಳಿ ಟೈಮ್ಸ್) : ಕೈಗಳ ಅಂಗ ವೈಕಲ್ಯತೆ ಹೊಂದಿ ಕಾಲಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು 424 ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ತಾಲೂಕಿನ ಕಂಚಿಕಾರಪೇಟೆ ನಿವಾಸಿ ರಾಜೇಶ್ ಆಚಾರ್ಯ ಹಾಗೂ ಜಲಜಾಕ್ಷಿ ದಂಪತಿಯ ಪುತ್ರ, ಬಂಟ್ವಾಳ ಎಸ್ ವಿ ಎಸ್ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಕೌಶಿಕ್ ಅವರನ್ನು ಗೂಡಿನಬಳಿ ಟೀಂ ಮುತಕಬ್ಬಲ್ ತಂಡದ ಸದಸ್ಯರು ಅವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.
ಈ ಸಂದರ್ಭ ಟೀಂ ಪದಾಧಿಕಾರಿಗಳಾದ ಮುಹಮ್ಮದ್ ಮಮ್ಮು, ಶಂಶೀರ್, ಹಾರಿಸ್, ರಿಝ್ವಾನ್ ಇಜ್ಜು, ಇರ್ಶಾದ್, ಮನ್ಸೂರ್ ಓಝಿಲ್, ಇರ್ಶಾದ್ ಡ್ರೀಮ್ಸ್, ತೌಸೀಫ್ ಮಿಲನ್, ಅಪ್ಪಿ ಎಂ.ಕೆ., ಹಾರಿಶ್, ಇಕ್ಬಾಲ್ ಬಾಬಿ, ಇಬ್ರಾಹಿಂ, ಇಲ್ಯಾಸ್, ಶಮೀರ್ ಅಮ್ಮಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment