ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 544 ಅಂಕಗಳನ್ನು ಗಳಿಸಿ ಸಾಧನೆಗೈದ ನರಿಕೊಂಬು ಗ್ರಾಮದ ಉಪ್ಪುಗುಡ್ಡೆ ನಿವಾಸಿ ಅಬ್ದುಲ್ ಲತೀಫ್-ಝುಬೈದಾ ದಂಪತಿಯ ಪುತ್ರಿ ಫಾತಿಮಾ ಶಹಾದಾಳನ್ನು ಭಾನುವಾರ ಮಾಜಿ ಸಚಿವ ಬಿ ರಮಾನಾಥ ರೈ ಸನ್ಮಾನಿಸಿ, ಗೌರವಿಸಿದರು. ಈ
ಈ ಸಂದರ್ಭ ತಾ.ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ನರಿಕೊಂಬು ಗ್ರಾ.ಪಂ. ಸದಸ್ಯರಾದ ಮಾಧವ ಕರ್ಬೆಟ್ಟು, ರವೀಂದ್ರ ಸಪಲ್ಯ, ಚಂದ್ರಾವತಿ ರತ್ನಾಕರ ನಾಯ್ಕ, ಬೂತ್ ಅಧ್ಯಕ್ಷ ಅಬೂಬಕ್ಕರ್ ಉಪ್ಪುಗುಡ್ಡೆ, ಪ್ರಮುಖರಾದ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಅಹಮದ್ ಬಾವಾ, ಹಾಮದ್ ಹಾಜಿ, ಹಾಜಿ ಪಿ.ಎಸ್. ಅಬ್ದುಲ್ ಲತೀಫ್, ಇಸ್ಮಾಯಿಲ್ ಆಲಡ್ಕ, ಇಸ್ಮಾಯಿಲ್ ಉಪ್ಪುಗುಡ್ಡೆ, ಅರುಣ್ ಶೆಟ್ಟಿ ಅಂತರ, ಹರೀಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment