ಮಂಗಳೂರು (ಕರಾವಳಿ ಟೈಮ್ಸ್) : ನಗರದ ಬಂದರ್ ಎಂಬಲ್ಲಿ ಅಂಗಡಿಯೊಂದು ಇತ್ತೀಚೆಗೆ ಬೆಂಕಿ ಅವಘಡಕ್ಕೆ ಗುರಿಯಾಗಿ ಸಂಪೂರ್ಣ ಸುಟ್ಟು ಹೋಗಿತ್ತು. ಈ ಬಗ್ಗೆ ಕ್ರಮ ವಹಿಸಿದ ಮಂಗಳೂರು ಶಾಸಕ ಯು ಟಿ ಖಾದರ್ ಅವರು ನಷ್ಟದಿಂದ ಸಂಕಷ್ಟಕ್ಕೊಳಗಾದ ಆ ಕುಟುಂಬಕ್ಕೆ ದುಬೈ ಉದ್ಯಮಿ ಅಲ್ತಾಫ್ ಎಂಬವರ ನೆರವಿನಿಂದ 1 ಲಕ್ಷ ರೂಪಾಯಿ ಧನ ಸಹಾಯ ನೀಡಿದ್ದಾರೆ.
ಈ ಸಂದರ್ಭ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಸಂಶುದ್ದೀನ್ ಬಂದರ್, ಸಿ ಎಂ ಮುಸ್ತಫಾ , ಬಿ ಎಸ್ ಇಂತಿಯಾಝ್ ಮೊದಲಾದವರು ಉಪಸ್ಥಿತರಿದ್ದರು. ಬಡವರ ಸೇವೆ ಮಾಡುವ ಶಾಸಕರ ಸೇವಾ ಕಾಳಜಿಯನ್ನು ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಶ್ಲಾಘಿಸಿದ್ದಾರೆ.
0 comments:
Post a Comment