ಸುಳ್ಯ (ಕರಾವಳಿ ಟೈಮ್ಸ್) : ಸುಳ್ಯ ಶಾಸಕ ಎಸ್ ಅಂಗಾರ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬೆಂಗಳೂರಿನಿಂದ ಬಂದ ನಂತರ ತಲೆನೋವು ಕಾಣಿಸಿಕೊಂಡ ಕಾರಣ ಅವರು ವೈದ್ಯರಲ್ಲಿ ಪರೀಕ್ಷಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಶಾಸಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸದ್ಯ ಅಂಗಾರ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.
ಈ ಮಧ್ಯೆ ಅವರ ಕಾರು ಚಾಲಕಗೂ ಕೋವಿಡ್ ವೈರಸ್ ಸೋಂಕು ಬಾಧಿಸಿದೆ ಎಂದು ತಿಳಿದು ಬಂದಿದೆ.
0 comments:
Post a Comment