ಶ್ರೀಲಂಕಾ ಸಾರ್ವತ್ರಿಕ ಚುನಾವಣೆ : ಮಹಿಂದ ರಾಜಪಕ್ಸೆ ನೇತೃತ್ವದ ಆಡಳಿತರೂಢ ಪಕ್ಷಕ್ಕೆ ಮತ್ತೆ ಅಧಿಕಾರ ಖಚಿತ! - Karavali Times ಶ್ರೀಲಂಕಾ ಸಾರ್ವತ್ರಿಕ ಚುನಾವಣೆ : ಮಹಿಂದ ರಾಜಪಕ್ಸೆ ನೇತೃತ್ವದ ಆಡಳಿತರೂಢ ಪಕ್ಷಕ್ಕೆ ಮತ್ತೆ ಅಧಿಕಾರ ಖಚಿತ! - Karavali Times

728x90

7 August 2020

ಶ್ರೀಲಂಕಾ ಸಾರ್ವತ್ರಿಕ ಚುನಾವಣೆ : ಮಹಿಂದ ರಾಜಪಕ್ಸೆ ನೇತೃತ್ವದ ಆಡಳಿತರೂಢ ಪಕ್ಷಕ್ಕೆ ಮತ್ತೆ ಅಧಿಕಾರ ಖಚಿತ!

 


ಕೊಲಂಬೊ (ಕರಾವಳಿ ಟೈಮ್ಸ್) : ಶ್ರೀಲಂಕಾ ದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸೆ ಅವರ ಆಡಳಿತಾ ರೂಢ ಎಸ್‌ಎಲ್‌ಪಿಪಿ (ಶ್ರೀಲಂಕಾ ಪೀಪಲ್ಸ್ ಪಾರ್ಟಿ) ಪಕ್ಷ ಭಾರೀ ಮುನ್ನಡೆ ಸಾಧಿಸಿದ್ದು, ಮತ್ತೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ.


ದ್ವೀಪ ರಾಷ್ಟ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ತಡರಾತ್ರಿಯೂ ಮುಂದುವರಿಯಿತು. ಶ್ರೀಲಂಕಾ ಸಂಸತ್‌ ಸದಸ್ಯರ ಒಟ್ಟು ಸಂಖ್ಯೆ 225 ಆಗಿದ್ದು ಈ ಪೈಕಿ ಪ್ರಕಟವಾದ ಫಲಿತಾಂಶಗಳ ಪೈಕಿ ರಾಜಪಕ್ಸೆಯವರ ಪಕ್ಷ ಎಸ್ ಎಲ್ ಪಿಪಿ 145 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದು, ರಾಜಪಕ್ಸೆ ಅವರ ಮೈತ್ರಿಕೂಟ ಒಟ್ಟು 150 ಸ್ಥಾನಗಳನ್ನು ಗೆದ್ದುಕೊಂಡಿದೆ.


 ಚಲಾವಣೆಯಾದ ಒಟ್ಟು 6.8 ಮಿಲಿಯನ್ ಮತಗಳ ಪೈಕಿ ರಾಜಪಕ್ಸೆ ಅವರ ಪಕ್ಷಕ್ಕೇ ಶೇ.59.9ರಷ್ಟು ಮತಗಳು ಚಲಾವಣೆಯಾಗಿದೆ ಎನ್ನಲಾಗಿದೆ.  ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ‘ಇದು ಆಡಳಿತಾರೂಢ ಪಕ್ಷಕ್ಕೆ ಲಭಿಸಿದ ಅದ್ಭುತ ಗೆಲುವು’ ಎಂದು ಟ್ವೀಟ್‌ ಮಾಡಿದ್ದಾರೆ.  

ಮಹಿಂದ ಅವರ ಪ್ರಬಲ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲಾಗಿರುವ ಸಜಿತ್‌ ಪ್ರೇಮದಾಸ ಅವರ ಪಕ್ಷ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ (ಯುಎನ್‌ಪಿ) ನಾಲ್ಕನೇ ಸ್ಥಾನ ಪಡೆದಿದೆ.


ರಾಜಪಕ್ಸೆ ಅಭಿನಂದಿಸಿದ  ಪ್ರಧಾನಿ ಮೋದಿ


ಶ್ರೀಲಂಕಾದಲ್ಲಿ ರಾಜಪಕ್ಸೆ ಅವರ ಗೆಲುವು ಖಚಿತವಾಗುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು  ರಾಜಪಕ್ಸೆ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.  ಈ ಕುರಿತು ಸ್ವತಃ ಮಹೀಂದಾ ರಾಜಪಕ್ಸೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಚುನಾವಣೆ ವಿಜಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದು, ಶ್ರೀಲಂಕಾ ಜನರ ಆಶೀರ್ವಾದದೊಂದಿಗೆ ಭಾರತದೊಂದಿಗಿನ ಸುಮಧುರ ಸಂಬಂಧವನ್ನು ಮುಂದುವರೆಸುವುದಾಗಿ ರಾಜಪಕ್ಸೆ ಹೇಳಿದ್ದಾರೆ. ಭಾರತ-ಶ್ರೀಲಂಕಾ ಸಂಬಂಧ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಮತ್ತಷ್ಟು ಗಟ್ಟಿಯಾಗಲಿದ್ದು, ಮೋದಿ ಅವರೊಂದಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಸಿದ್ಧ ಎಂದು ರಾಜಪಕ್ಸೆ ಭರವಸೆ ನೀಡಿದ್ದಾರೆ. ರಾಜಪಕ್ಸೆ ಅವರ ಟ್ವೀಟ್‌ಗೆ ಮರು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತ-ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಿದ್ಧವಿರುವುದಾಗಿ ಹೇಳಿದ್ದಾರೆ.



  • Blogger Comments
  • Facebook Comments

0 comments:

Post a Comment

Item Reviewed: ಶ್ರೀಲಂಕಾ ಸಾರ್ವತ್ರಿಕ ಚುನಾವಣೆ : ಮಹಿಂದ ರಾಜಪಕ್ಸೆ ನೇತೃತ್ವದ ಆಡಳಿತರೂಢ ಪಕ್ಷಕ್ಕೆ ಮತ್ತೆ ಅಧಿಕಾರ ಖಚಿತ! Rating: 5 Reviewed By: karavali Times
Scroll to Top