ಮಂಗಳೂರು (ಕರಾವಳಿ ಟೈಮ್ಸ್) : 2020-21 ಸಾಲಿನ ಐದನೆ ಸರಣಿಯ ಸಾವರಿನ್ ಗೋಲ್ದ್ ಬಾಂಡ್ ಯೋಜನೆಯು ಆಗಸ್ಟ್ 3 ರಂದು ಪ್ರಾರಂಭಗೊಳ್ಳುವುದು. ಗ್ರಾಹಕರು ಆಗಸ್ಟ್ 3 ರಿಂದ 7ರವರೆಗೆ ತಮ್ಮ ಸಮೀಪದ ಅಂಚೆ ಕಛೇರಿಯ ಮೂಲಕ ಸಾವರಿನ್ ಗೋಲ್ದ್ ಬಾಂಡ್‍ನಲ್ಲಿ ಹೂಡಿಕೆ ಮಾಡಿಕೊಳ್ಳಬಹುದು.
ಒಂದು ಗ್ರಾಮ್ ಚಿನ್ನದ ದರ ರೂ. 5334/- ಗೆ ನಿಗದಿಪಡಿಸಲಾಗಿದೆ, ಕನಿಷ್ಟ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಟ ಹೂಡಿಕೆಯಾಗಿರುತ್ತದೆ, ಬಾಂಡ್ ಅವಧಿ 8ವರ್ಷ. ಬಾಂಡ್ ಅವಧಿ ಮುಗಿದಾಗ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಚಿನ್ನದ ದರದ ಮೊತ್ತವನ್ನು ನೀಡಲಾಗುವುದು, ವಾರ್ಷಿಕ ಶೇ. 2.5ರಷ್ಟು ನಿಶ್ಚಿತ ಬಡ್ದಿಯೂ ಲಭ್ಯ., 5, 6 ಮತ್ತು 7ನೇ ವರ್ಷಗಳಲ್ಲಿಯೂ ಸಹ ನಿರ್ಗಮಿಸುವ ಅವಕಾಶವಿದೆ. ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ 0824-2218400, 9448291072 ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಉಪ ವಿಭಾಗದ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment