ಪೂರಕ ಪರೀಕ್ಷೆಗೆ ಎರಡು ದಿನದಲ್ಲಿ ದಿನಾಂಕ ಪ್ರಕಟ
ಬೆಂಗಳೂರು (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಸ್ಕ್ಯಾನ್ ಪಡೆಯಲು ಅರ್ಜಿ ಸಲ್ಲಿಕೆಗೆ ಆಗಸ್ಟ್ 20 ಕೊನೆಯ ದಿನಾಂಕವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆಗೆ ಆಗಸ್ಟ್ 24 ಕೊನೆ ದಿನವಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಪಡೆಯಲು 405 ರೂಪಾಯಿ, ಮರು ಮೌಲ್ಯಮಾಪನ ಅರ್ಜಿ ಸಲ್ಲಿಕೆಗೆ ಪ್ರತಿ ವಿಷಯಕ್ಕೆ 805 ರೂಪಾಯಿ ದರ ನಿಗದಿಯಾಗಿದೆ. ಸೆಪ್ಟೆಂಬರ್‍ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಎರಡು ದಿನಗಳಲ್ಲಿ ಪೂರಕ ಪರೀಕ್ಷೆ ದಿನಾಂಕ ಪ್ರಕಟವಾಗಲಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.
0 comments:
Post a Comment