ಮಧ್ಯಾಹ್ನ 3 ಗಂಟೆಗೆ ಸಚಿವರ ಸುದ್ದಿಗೋಷ್ಟಿ, ಬಳಿಕ ವೆಬ್‍ಸೈಟ್‍ಗೆ ಫಲಿತಾಂಶ
ಎಸ್‍ಎಂಎಸ್ ಮೂಲಕ ವಿದ್ಯಾರ್ಥಿ ಪೋಷಕರ ಮೊಬೈಲಿಗೂ ಬರಲಿದೆ ಸಂದೇಶ
ಬೆಂಗಳೂರು (ಕರಾವಳಿ ಟೈಮ್ಸ್) : ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಹು ನಿರೀಕ್ಷಿತ ಫಲಿತಾಂಶ ನಾಳೆ ಅಂದರೆ ಆಗಸ್ಟ್ 10 ರಂದು ಸೋಮವಾರ ಮಧ್ಯಾಹ್ನ 3 ಗಂಟೆ ಬಳಿಕ ಇಲಾಖಾ ವೆಬ್ ಸೈಟ್ ಗಳಲ್ಲಿ ಪ್ರಕಟಗೊಳ್ಳಲಿದೆ.
ಮಧ್ಯಾಹ್ನ 3 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ಫಲಿತಾಂಶ ಘೋಷಿಸುವರು. ಬಳಿಕ ಇಲಾಖಾ ವೆಬ್‍ಸೈಟಿನಲ್ಲಿ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆಗೂ ಫಲಿತಾಂಶವನ್ನು ಎಸ್‍ಎಂಎಸ್ ಮಾಡುವ ವ್ಯವಸ್ಥೆಯನ್ನು ಎಸ್ಸೆಸ್ಸೆಲ್ಸಿ ಬೋರ್ಡ್ ಮಾಡಿಕೊಂಡಿದೆ.
www.kseeb.kar.nic.in ಹಾಗೂ www.karresults.nic.in ವೆಬ್ ಸೈಟ್ ಗಳಲ್ಲಿ ಫಲಿತಾಂಶ ವೀಕ್ಷಿಸಬಹುದು. ಕಳೆದ ಜೂನ್ 25 ರಿಂದ ಜುಲೈ 3 ರವೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೊರೋನಾ ಮುಂಜಾಗ್ರತೆಯೊಂದಿಗೆ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಪರೀಕ್ಷೆ ವಿಳಂಬವಾದರೂ ಮೌಲ್ಯಮಾಪನವನ್ನು ವೇಗವಾಗಿ ಮುಗಿಸಿ ಆದಷ್ಟು ಬೇಗ ಫಲಿತಾಂಶ ನೀಡಲಾಗುತ್ತಿದೆ. ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರ ಭವಿಷ್ಯ ಸೋಮವಾರ ಮಧ್ಯಾಹ್ನದ ಬಳಿಕ ನಿರ್ಧಾರವಾಗಲಿದೆ.
0 comments:
Post a Comment