ಕೋಲಾರ (ಕರಾವಳಿ ಟೈಮ್ಸ್) : ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದ್ದರೆ, ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಪೂಜೆ ಮಾಡುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟೀಕಾಪ್ರಹಾರಗೈದಿದ್ದಾರೆ.
ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಕೋವಿಡ್ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಈ ದೇಶವನ್ನು ಲಾಕ್‍ಡೌನ್ ಮಾಡಿದಾಗ ನಮ್ಮಲ್ಲಿ ಕೇವಲ 524 ಕೊರೋನಾ ಪ್ರಕರಣ ಮಾತ್ರ ಇತ್ತು. 21 ದಿನಗಳಲ್ಲಿ ಎಲ್ಲವೂ ನಿರ್ನಾಮ ಆಗುತ್ತೆ ಎಂದರು. ಆದರೆ ಈಗ ಕೊರೊನಾ ಸೋಂಕು 14 ಲಕ್ಷಕ್ಕೆ ಏರಿದೆ. ಇನ್ನು ಸರಕಾರ ಕೈಗೊಂಡ ಕ್ರಮವಾದರೂ ಏನು ಎಂದು ಪ್ರಶ್ನಿಸಿದರು.
ದೇಶದಲ್ಲಿರುವ ಸಮಸ್ಯೆಯನ್ನು ಬಿಟ್ಟು ಅಯೋಧ್ಯೆಯಲ್ಲಿ ಪೂಜೆ ಮಾಡುತ್ತಿದ್ದಾರೆ ಎಂದ ರಮೇಶ್ ಕುಮಾರ್, ಶ್ರೀರಾಮ ಅವರನ್ನು ನಮ್ಮನ್ನು ಸಾಯುತ್ತಿರುವ ಎಲ್ಲರನ್ನು ಕಾಪಾಡಲಿ, ಈ ದೇಶವನ್ನು ಹಾಗೂ ಆ ಪ್ರಧಾನ ಮಂತ್ರಿಯನ್ನು ಶ್ರೀರಾಮನೆ ಕಾಪಾಡಲಿ ಎಂದು ಕುಟುಕಿದರು.
0 comments:
Post a Comment