ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರ ಜನ್ಮ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
ಮಾಜಿ ಸಚಿವ ಬಿ ರಮಾನಾಥ ರೈ ದೀಪ ಬೆಳಗಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ಹಾರ ಹಾಕುವ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಾಜೀವ್ ಗಾಂಧಿಯವರು ನಮ್ಮ ದೇಶದ ಯುವ ಜನಾಂಗಕ್ಕೆ ವಿಶೇಷ ಸ್ಥಾನಮಾನ ನೀಡಿ ಜಗತ್ತಿನ ಎಲ್ಲಾ ದೇಶಗಳಿಗೆ ಸರಿಸಮಾನವಾಗಿ ಪೈಪೆÇೀಟಿ ನೀಡಲು ಶಕ್ತಿ ತುಂಬಿದ್ದರು. ಅದೇ ರೀತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಉಳುವವನೇ ಹೊಲದೊಡೆಯ ಎಂಬ ಮಾತಿನಂತೆ ಭೂಸುಧಾರಣಾ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡಿ ಬಡವರ ಪಾಲಿಗೆ ದೇವ ಮಾನವನಂತಾಗಿದ್ದರು ಎಂದು ಸ್ಮರಿಸಿಕೊಂಡರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅನುಸ್ಮರಣಾ ಭಾಷಣಗೈದರು. ಜಿ ಪಂ ಬಿ ಪದ್ಮಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯ ಗಂಗಾಧರ್ ಪೂಜಾರಿ, ಪ್ರಮುಖರಾದ ರವಿ ಪೂಜಾರಿ ಪಂಜಿಕಲ್ಲು, ಸುರೇಶ್ ಪೂಜಾರಿ ಜೋರ, ಜಗನ್ನಾಥ ತುಂಬೆ, ಸುವರ್ಣ ಕುಮಾರ್ ಜೈನ್, ಗಂಗಯ್ಯ ಡಿ ಎನ್ ಇರ್ವತ್ತೂರು, ವಿನ್ಸೆಂಟ್ ಪಿಂಟೋ ಸರಪಾಡಿ, ವೆಂಕಪ್ಪ ಪೂಜಾರಿ, ಫಾರೂಕ್ ನಾವೂರು, ಅಮ್ಮು ಅರಬಿಗುಡ್ಡೆ, ಪುಷ್ಪರಾಜ್ ನಾವೂರು, ಸಂತೋಷ್ ಪೂಜಾರಿ ಪಂಜಿಕಲ್ಲು, ಎ ಜೆ ಮೊರಾಸ್ ಅಲ್ಲಿಪಾದೆ, ಪದ್ಮನಾಭ ಸಾವಂತ್, ಪೂವಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಮಹಾಬಲ ಬಂಗೇರ ಸ್ವಾಗತಿಸಿ, ರಮೇಶ್ ನಾಯಕ್ ರಾಯಿ ವಂದಿಸಿದರು.
0 comments:
Post a Comment