ಬಂಟ್ವಾಳ (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಮೊಡಂಕಾಪು ಇನ್ಫಂಟ್ ಜೀಸಸ್ ಇಂಗ್ಲಿಷ್ ಮೀಡಿಯಂ ಶಾಲಾ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿ ಶೇ. 99.68 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯದಲ್ಲೇ ತೃತೀಯ ಸ್ಥಾನಿಯಾಗಿ ಸಾಧನೆ ಮೆರೆದಿರುವ ಹಿನ್ನಲೆಯಲ್ಲಿ ಆಕೆಯ ಮನೆಗೆ ತೆರಳಿದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಅಭಿನಂದನೆ ಸಲ್ಲಿಸಿದೆ.
ಮೊಡಂಕಾಪು ಗಾಂಧೋಡಿ ನಿವಾಸಿ ಅವಿಲ್ ಲೆವಿಸ್ ಹಾಗೂ ಲವೀನಾ ಡಿ'ಸೋಜ ದಂಪತಿಯ ಪುತ್ರಿಯಾಗಿರುವ ಈಕೆ ಬಂಟ್ವಾಳ ತಾಲೂಕಿಗೆ ಹಾಗೂ ಕಲಿತ ಶಾಲೆಗೆ ಕೀರ್ತಿ ತಂದಿರುವ ಹಿನ್ನಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ನಿಯೋಗದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ರೈ ಆಪ್ತ ಸಹಾಯಕ ಡೆಂಝಿಲ್ ನೊರೊನ್ಹಾ ಮೊದಲಾದವರು ಇದ್ದರು.
0 comments:
Post a Comment