ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಯಿಲ-ಸಂಗಬೆಟ್ಟು ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜ್ ಅವರಿಗೆ ಲಿಖಿತ ಪತ್ರ ಬರೆದು ಆಗ್ರಹಿಸಿದ್ದಾರೆ.
ಸುಮಾರು ನಾಲ್ಕೂವರೆ ಕಿ ಮೀ ಉದ್ದದ ಈ ರಸ್ತೆಗೆ ಸ್ಟೇಟ್ ಹೈವೇ ಡೆವಲಪ್‍ಮೆಂಟ್ ಪ್ರೊಜೆಕ್ಟ್ (ಎಸ್ ಎಚ್ ಡಿ ಪಿ) ಯೋಜನೆಯಡಿ 2 ವರ್ಷಗಳ ಹಿಂದೆ 12 ಕೋಟಿ ರೂಪಾಯಿ ಮಂಜೂರಾತಿಯಾಗಿದೆ. ಸದ್ರಿ ಕಾಮಗಾರಿಯ ಟೆಂಡರ್ ಅನುಮತಿಯಾಗಿ 1 ವರ್ಷ ಕಳೆದಿದೆ. ಭಟ್ಕಳ ಇಬ್ರಾಹಿಂ ಎಂಬವರು ಸದ್ರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ. ಆದರೂ ಇದುವರೆಗೂ ಈ ರಸ್ತೆಯ ಕಾಮಗಾರಿ ಆರಂಭಗೊಂಡಿಲ್ಲ. ತಕ್ಷಣದಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡುವಂತೆ ರಮಾನಾಥ ರೈ ಬರೆದ ಪತ್ರದಲ್ಲಿ ಇಂಜಿನಿಯರ್ ಅವರಿಗೆ ಆಗ್ರಹಿಸಿದ್ದಾರೆ.
0 comments:
Post a Comment