ಬಂಟ್ವಾಳ (ಕರಾವಳಿ ಟೈಮ್ಸ್) : ಪುದು ಗ್ರಾಮದ ಪೇರಿಮಾರ್ ಮಸ್ಜಿದುಳ್ ಖಿಳರ್ ಹಾಗೂ ದಾರುಲ್ ಉಲೂಂ ಮದರಸ ಮತ್ತು ಎಸ್.ವೈ.ಎಸ್.-ಎಸ್.ಎಸ್.ಎಫ್. ಪೇರಿಮಾರ್ ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ದೇಶದ 74 ಸ್ವಾತಂತ್ರ್ಯ ದಿನ ಇಲ್ಲಿನ ಮಸೀದಿ ವಠಾರದಲ್ಲಿ ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷ ಶಾಫಿ ಧ್ವಜಾರೋಹಣಗೈದರು. ಮಸೀದಿ ಖತೀಬ್ ರಫೀಕ್ ಸಅದಿ ಅಲ್-ಅಫ್ಳಲಿ ಹುತಾತ್ಮರ ಅನುಸ್ಮರಣೆ ಹಾಗೂ ಆಝಾದಿ ಸಂದೇಶ ನೀಡಿದರು. ಮಸ್ಜಿದುಳ್ ಖಿಳರ್ ಹಾಗೂ ದಾರುಲ್ ಉಲೂಂ ಮದರಸ ಮುಅಲ್ಲಿಮರಾದ ಮುಹಮ್ಮದ್ ನಿಝಾಮಿ, ಅಬೂಬಕರ್ ಸಿದ್ದೀಕ್ ಲತೀಫಿ, ನವಾಝ್ ಝೈನಿ, ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಳೂಲ್, ಕೋಶಾಧಿಕಾರಿ ಹುಸೈನ್ ಬಿ, ಶಾಖಾ ಪ್ರಧಾನ ಕಾರ್ಯದರ್ಶಿ ರಹೀಂ ಬಿ.ಆರ್., ಉಪಾಧ್ಯಕ್ಷ ಅಮೀನ್ ಮಾಲಿಕ್, ಕಾರ್ಯದರ್ಶಿ ಉನೈಸ್ ಬಾಲ್ದಬೊಟ್ಟು, ಕೆಸಿಎಫ್ ಕಾರ್ಯಕರ್ತ ನಿಯಾಝ್ ಅಹ್ಮದ್, ಎಸ್.ಬಿ.ಎಸ್. ವಿದ್ಯಾರ್ಥಿಗಳು, ಸ್ಥಳೀಯರು ಭಾಗವಹಿಸಿದ್ದರು.
0 comments:
Post a Comment