ಬಂಟ್ವಾಳ (ಕರಾವಳಿ ಟೈಮ್ಸ್) : ಸರಕಾರಿ ಆಸ್ಪತ್ರೆ ಬಲಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ ಎಂದು ಆಗ್ರಹಿಸಿ ಹಾಗೂ ಕೊರೋನಾ ಹೆಸರಲ್ಲಿ ಆಸ್ಪತ್ರೆಗಳ ಲೂಟಿಕೋರ ನೀತಿಯನ್ನು ಖಂಡಿಸಿ, ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ವಿರೋಧಿಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಲಪಡಿಸುವಂತೆ ಒತ್ತಾಯಿಸಿ, ಎಲ್ಲರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ ಒತ್ತಾಯಿಸಿ ಡಿವೈಎಫ್‍ಐ ಮೊಂಟೆಪದವು ಹಾಗೂ ಕೊಲ್ಲರಕೋಡಿ ಘಟಕಗಳ ನೇತೃತ್ವದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಕಚೇರಿ ಎದುರು ಸೋಮವಾರ ಭಿತ್ತಿಪತ್ರ ಪ್ರದರ್ಶನ ನಡೆಸಿ ಮನವಿ ಸಲ್ಲಿಸಲಾಯಿತು.
ಸಭೆಯನ್ನುದ್ದೇಶಿಸಿ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆ ಸಿ ರೋಡ್ ಮಾತನಾಡಿದರು. ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಎಸ್ ಎಫ್ ಐ ಜಿಲ್ಲಾ ಉಪಾಧ್ಯಕ್ಷ ಶಮಾಸ್ ಕೆ ಸಿ ರೋಡ್, ಡಿವೈಎಫ್‍ಐ ಮೊಂಟೆಪದವು ಘಟಕಾಧ್ಯಕ್ಷ ಸಿರಾಜ್ ಬಿ ಎಂ, ಕೊಲ್ಲರಕೋಡಿ ಘಟಕಾಧ್ಯಕ್ಷ ಆಸಿಫ್ ಕೊಲ್ಲರಕೋಡಿ, ಪ್ರಮುಖರಾದ ಶರೀಫ್ ವಿದ್ಯಾನಗರ, ಅಶ್ರಫ್ ಅಚ್ಚು ಸಾರ್ಥಬೈಲ್, ಹಿದಾಯತ್ ಮೊಂಟೆಪದವು, ಯೂಸುಫ್, ನಿಝಮ್, ಶಾಹಿಲ್, ನಾಸಿರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment