ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಎಸ್ಸೆಫ್ ನಂದಾವರ ಶಾಖೆಯ ಆಶ್ರಯದಲ್ಲಿ ದೇಶದ ಸ್ವಾತಂತ್ರ್ಯೋತ್ಸವ ಹಾಗೂ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ನಂದಾವರ ಕೇಂದ್ರ ಮಸೀದಿ ಅಧ್ಯಕ್ಷ ಅಧ್ಯಕ್ಷ ಮುಹಮ್ಮದ್ ಶರೀಫ್ ನಂದಾವರ ಧ್ವಜಾರೋಹಣಗೈದರು. ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಶರೀಫ್ ಮಲ್ಪೆ ಅಧ್ಯಕ್ಷತೆ ವಹಿಸಿದ್ದರು. ನಂದಾವರ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ನಝೀರ್ ಉಸ್ತಾದ್ ದುವಾಶಿರ್ವಚನಗೈದರು.
ಎಸ್ಕೆಎಸ್ಸೆಎಸ್ಸೆಫ್ ತ್ವಲಬಾ ವಿಂಗ್ ಬಂಟ್ವಾಳ ವಲಯ ಹಾಗೂ ಎಸ್ಕೆಎಸ್ಸೆಎಸ್ಸೆಫ್ ನಂದಾವರ ಶಾಖಾ ಪ್ರಧಾನ ಕಾರ್ಯದರ್ಶಿ ಅನ್ಸೀಫ್ ನಂದಾವರ ಫ್ರೀಡಂ ಸ್ಕ್ವಾರ್ ಪ್ರತಿಜ್ಞಾ ಬೋಧಿಸಿದರು. ಅಶ್ಫಾಕ್ ಫೈಝಿ ನಂದಾವರ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ನಂದಾವರ ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಇಮ್ರಾನ್ ನಂದಾವರ, ಸದಸ್ಯರಾದ ಶಾಫಿ ನಂದಾವರ, ಕಮಾಲ್ ನಂದಾವರ, ಇಸ್ಮಾಯಿಲ್ ನಂದಾವರ, ಸಜಿಪ ಮುನ್ನೂರು ಗ್ರಾ.ಪಂ. ನಿಟಕಪೂರ್ವ ಸದಸ್ಯರಾದ ಶÀಮೀರ್ ನಂದಾವರ, ನಂದಾವರ ಎಸ್.ಡಿ.ಪಿ.ಐ. ಸದಸ್ಯರಾದ ಸಿದ್ದೀಕ್ ನಂದಾವರ, ಆಸೀಫ್ ದಾಸರಗುಡ್ಡೆ, ಎಸ್ಕೆಎಸ್ಸೆಎಸ್ಸೆಫ್ ವಿಖಾಯ ಹಾಗೂ ನಂದಾವರ ಶಾಖೆಯ ಸದಸ್ಯರಾದ ಫಾರೂಕ್ ನಂದಾವರ ಕೋಟೆ, ತೌಸೀಫ್ ನಂದಾವರ, ಶರೀಫ್ ಫೈಝಿ ನಂದಾವರ, ಆರೀಫ್ ನಂದಾವರ, ಇಗ್ಗ ನಂದಾವರ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605 ಅಂಕಗಳನ್ನು ಗಳಿಸಿದ ಎಸ್.ಎಲ್.ಎನ್.ಪಿ. ವಿದ್ಯಾರ್ಥಿ ಮುಝಮ್ಮಿಲ್ ನಂದಾವರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಖಾಝಿಯಾಗಿದ್ದ ಮರ್‍ಹೂಂ ಸಿ.ಎಂ. ಉಸ್ತಾದ್ ಅವರ ಕೊಲೆ ರಹಸ್ಯ ಬಯಲಿಗೆಳೆಯಲು ಆಗ್ರಹಿಸಿ ಪೋಸ್ಟರ್ ಪ್ರದರ್ಶಿಸಲಾಯಿತು.
0 comments:
Post a Comment