ಬಂಟ್ವಾಳ (ಕರಾವಳಿ ಟೈಮ್ಸ್) : ಆಯುಷ್ಮಾನ್ ಕಾರ್ಡ್ ನೊಂದಾವಣಾ ಕಾರ್ಯಕ್ರಮವು ಶನಿವಾರ ನಂದಾವರ ನಿವಾಸಿ, ಸಜಿಪಮುನ್ನೂರು ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಇದಿನಬ್ಬ ಅವರ ಮನೆಯ ಮೇಲ್ಚಾವಣಿಯಲ್ಲಿ ನಡೆಯಿತು.
ಸುಮಾರು 400ಕ್ಕೂ ಹೆಚ್ಚು ಜನರು ನೊಂದಾವಣೆ ಮಾಡಿಸಿಕೊಂಡರು. ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು ಸರಕಾರದ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳು ಇದೇ ರೀತಿಯಲ್ಲಿ ಜನರ ಬಳಿ ತಲುಪುವಂತಾಗಲಿ ಎಂದು ಹಾರೈಸಿದರು.
0 comments:
Post a Comment