9 ಸಿಕ್ಸರ್, 2 ಬೌಂಡರಿ ಸಹಿತ 28 ಎಸೆತಗಳಿಂದ 72 ರನ್ ಚಚ್ಚಿದ ಪೊಲ್ಲಾರ್ಡ್
ಪೊರ್ಟ್ ಆಫ್ ಸ್ಪೇನ್ (ಕರಾವಳಿ ಟೈಮ್ಸ್) : ಸ್ಟಾರ್ ಆಟಗಾರ ಕೀರನ್ ಪೊಲ್ಲಾರ್ಡ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ-20 ಕೂಟದ 17ನೇ ಪಂದ್ಯದಲ್ಲಿ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡ ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧ ವಿರೋಚಿತ ಗೆಲುವು ದಾಖಲಿಸಿದೆ.
ಸಹ ಆಟಗಾರರು ಎದುರಾಳಿ ತಂಡಕ್ಕೆ ಅಗ್ಗದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸುತ್ತಿದ್ದರೂ, ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೀರನ್ ಪೊಲ್ಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 28 ಎಸೆತಗಳಿಂದ ಬರೋಬ್ಬರಿ 72 ರನ್ ಸಿಡಿಸಿದ ಪೊಲ್ಲಾರ್ಡ್ ಅವರ ಬ್ಯಾಟಿನಿಂದ 9 ಸಿಕ್ಸರ್ ಹಾಗೂ 2 ಬೌಂಡರಿಗಳು ಸಿಡಿಯಲ್ಪಟ್ಟಿದ್ದು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಪರಿಣಾಮವಾಗಿ ಟ್ರಿನ್ ಬ್ಯಾರ್ಗೋ ನೈಟ್ ರೈಡರ್ಸ್ ತಂಡವು ಬಾರ್ಬಡೋಸ್ ಟ್ರಿಡೆಂಟ್ಸ್ ತಂಡವನ್ನು ಎರಡು ವಿಕೆಟ್‍ಗಳಿಂದ ಮಣಿಸಿ ಮೆರೆದಾಡಿತು.
ಈ ಮೂಲಕ ನೈಟ್ ರೈಡರ್ಸ್ ತಂಡ ಪ್ರಮುಖ ಆಟಗಾರರಾದ ಸುನಿಲ್ ನರೈನ್ ಹಾಗೂ ಡಿ ಜೆ ಬ್ರಾವೋ ಇಲ್ಲದಿದ್ದರೂ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.
0 comments:
Post a Comment