ಕೋಯಿಕ್ಕೋಡ್ (ಕರಾವಳಿ ಟೈಮ್ಸ್) : ಕೇರಳದ ಕೋಝಿಕ್ಕೋಡಿನಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನ ಅಪಘಾತ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಹಾಗೂ ಫಸ್ಟ್ ಆಫೀಸರ್ ಅಖಿಲೇಶ್ ಕುಮಾರ್ ಎಂಬ ಇಬ್ಬರು ಪೈಲಟ್ ಗಳನ್ನು ಬಲಿ ಪಡೆದಿದೆ.
ಕ್ಯಾಪ್ಟನ್ ಸಾಠೆ ಅವರು ಭಾರತೀಯ ವಾಯುಪಡೆಯಲ್ಲಿ ಬೆಸ್ಟ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು. 1981 ರಲ್ಲಿ ಸೇರ್ಪಡೆಯಾಗಿದ್ದ ಸಾಠೆ 22 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಬೋಯಿಂಗ್ 737 ವಿಮಾನಗಳನ್ನು ಚಾಲನೆ ಮಾಡುವಲ್ಲಿ ಅತ್ಯಂತ ಅನುಭವ ಹೊಂದಿದ್ದರೆಂಬ ಖ್ಯಾತಿಗೆ ಭಾಜನರಾಗಿದ್ದ ಸಾಠೆ ಅವರು ಪ್ರಶಸ್ತಿ ವಿಜೇತ ಪೈಲಟ್ ಆಗಿದ್ದರು.
ಸಾಠೆ ಅವರಿಗೆ 58 ರಾಷ್ಟ್ರಪತಿ ಚಿನ್ನದ ಪದಕ ಪ್ರದಾನ ಮಾಡಲಾಗಿತ್ತು ಎಂದು ಮಾಹಿತಿ ತಿಳಿಸಿದೆ.
0 comments:
Post a Comment