ಮಂಗಳೂರು (ಕರಾವಳಿ ಟೈಮ್ಸ್) : ನಗರದ ಹೊರವಲಯದ ಅಡ್ಯಾರ್-ಕಣ್ಣೂರು, ಬೀಡು ತರ್ಬಿಯತುಲ್ ಅನಾಮ್ ಮದ್ರಸ ಹಾಗೂ ಎಸ್ಕೆಎಸ್ಸೆಸ್ಸೆಫ್ ಬೀಡು ಶಾಖೆಗಳ ಜಂಟಿ ಆಶ್ರಯದಲ್ಲಿ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫ್ರೀಡಂ ಸ್ಕ್ವೇರ್ ಶನಿವಾರ ತರ್ಬಿಯತುಲ್ ಅನಾಮ್ ಮದ್ರಸ ವಠಾರದಲ್ಲಿ ನಡೆಯಿತು. ಅಬ್ದುಲ್ ಮಜೀದ್ ಧ್ವಜಾರೋಹಣಗೈದರು. ಮುಹಮ್ಮದ್ ಹಾಜಿ ಅಶೋಕ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಝಮೀರ್ ಅನ್ಸಾರಿ ದುಆ ನೆರವೇರಿಸಿದರು. ಅಬೂಬಕ್ಕರ್ ಸಿದ್ದೀಖ್ ಮಾಲವಿ ಸಂದೇಶ ಭಾಷಣಗೈದರು. ಮುಹಮ್ಮದ್ ರಿಯಾಝ್ ಪ್ಲೆಕ್ಸ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುನೀರ್ ಬೀಡು, ಇ.ಕೆ ರಫೀಕ್, ಅಶ್ರಫ್ ಕೆ.ಎಸ್.ಎಚ್., ಅಝೀಝ್ ಶಾಝ್ ಅಪಾರ್ಟ್‍ಮೆಂಟ್, ಶಮೀರ್ ಬೀಡು, ಆಸೀಫ್ ಬ್ಯಾಗ್, ರಝಾಕ್ ಬೀಡು, ಸಿರಾಜ್ ಬೀಡು, ಝೈನುದ್ದೀನ್ ಬಡಿಲ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮರ್‍ಹೂಂ ಸಿ.ಎಂ. ಉಸ್ತಾದರ ಕೊಲೆ ಆರೋಪಿಗಳ ಬಂಧನಕ್ಕಾಗಿ ಆಗ್ರಹಿಸಿ ಪೆÇೀಸ್ಟರ್ ಪ್ರದರ್ಶಿಸಲಾಯಿತು.
0 comments:
Post a Comment