ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಫಲಿತಾಂಶ - Karavali Times ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಫಲಿತಾಂಶ - Karavali Times

728x90

17 August 2020

ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಫಲಿತಾಂಶ











ಬಂಟ್ವಾಳ (ಕರಾವಳಿ ಟೈಮ್ಸ್) : ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ವಂಶಿ ದೇವಾಡಿಗ 600 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಆದಿತ್ಯ ಮೈಥಿಲಿ 589 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಅಮೃತಾ 584 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವರ್ಷ ಕೆ. 581, ಯಶ್ವಿತ್ 577, ವಿಂಧ್ಯಾ 577 ಮತ್ತು ತೃತೀಯ ಕನ್ನಡದಲ್ಲಿ 100 ರಲ್ಲಿ 100, ದೀಪಕ್ 569, ವರ್ಷ 568, ಶ್ರಮಾ 568 ಪೂಜಾ 566, ಅನಘಾ 563 ದೊಂದಿಗೆ 90% ಕ್ಕಿಂತ ಹೆಚ್ಚು ಅಂಕ ಪಡೆದಿರುತ್ತಾರೆ. ಉತ್ತೀರ್ಣಗೊಂಡ 210 ವಿದ್ಯಾರ್ಥಿಗಳಲ್ಲಿ 30 ಮಂದಿ ವಿಶಿಷ್ಟ ಶ್ರೇಣಿ 151 ಮಂದಿ ಪ್ರಥಮ ಶ್ರೇಣಿ, 29 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. 

ತೃತೀಯ ಭಾಷೆ ಹಿಂದಿಯಲ್ಲಿ 5 ಮಂದಿ, ತೃತೀಯ ಕನ್ನಡದಲ್ಲಿ 5 ಮಂದಿ, ಹಾಗೂ ಸಮಾಜ ವಿಜ್ಞಾನದಲ್ಲಿ ಒಬ್ಬರು 100 ರಲ್ಲಿ 100 ಅಂಕ ಪಡೆಯುವುದರೊಂದಿಗೆ ಶಾಲೆಗೆ ಉತ್ತಮ ಫಲಿತಾಂಶ ಬಂದಿರುತ್ತದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. 






  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಫಲಿತಾಂಶ Rating: 5 Reviewed By: karavali Times
Scroll to Top