ಬುರೂಜ್ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ (ಕರಾವಳಿ ಟೈಮ್ಸ್) : ಕಲಾಬಾಗಿಲು-ರಝಾನಗರದ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನಲ್ಲಿ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾ ಧ್ವಜಾರೋಹಣಗೈದರು.
ಅಬ್ದುಲ್ ಶುಕೂರ್ ಒಮಾನಿ, ಅಬ್ದುಲ್ ರಝಾಕ್ ರಝಾನಗರಿ, ಹಬೀಬ್ ಅಬ್ದುಲ್ ಕದೀರ್, ಶಾಲಾ ಶಿಕ್ಷಕಿಯರಾದ ಎಲ್ಸಿ ವಿ.ಕೆ., ಚಂದ್ರಾವತಿ ಕೆ.ವಿ.ಆರ್., ನೂರ್‍ಜಹಾನ್ ಅಬ್ದುಲ್ಲಾ, ಅನ್ನಪೂರ್ಣೇಶ್ವರಿ, ವನಿತಾ ಎಸ್.ಶೆಟ್ಟಿ., ಖುರ್ಷಿದ್, ಶೇಖ್ ಸಾದಿಯ, ವಿಶಾಲ್ ವಿ. ಸಾಲ್ಯಾನ್, ಇಫಾಝ್ ಹಂಕರ್ಜಾಲ್, ಎಲ್ಸಿ ವಿ.ಕೆ., ವಿಶಾಲ್ ವಿ. ಸಾಲ್ಯಾನ್ ಮೊದಲಾದವರು ಭಾಗವಹಿಸಿದ್ದರು.
ಕಲಾಯಿ : ಎಸ್.ಡಿ.ಪಿ.ಐ. ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ (ಕರಾವಳಿ ಟೈಮ್ಸ್) : ಕಲಾಯಿ ಎಸ್.ಡಿ.ಪಿ.ಐ. ವತಿಯಿಂದ ದೇಶದ 74ನೇ ಸ್ವಾತಂತ್ರ್ಯೋತ್ಸವವನ್ನು ಕಲಾಯಿ ಮದೀನಾ ಜುಮಾ ಮಸೀದಿ ಮುಂಭಾಗ ಆಚರಿಸಲಾಯಿತು. ಮಸೀದಿ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಧ್ವಜಾರೋಹಣಗೈದರು. ಎಸ್.ಡಿ.ಪಿ.ಐ. ಕಲಾಯಿ ವಲಯಾಧ್ಯಕ್ಷ ಅಜರುದ್ದೀನ್, ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಜಿಲ್ಲಾ ಕಾರ್ಯದರ್ಶಿ ಶಬೀರ್ ತಲಪಾಡಿ, ಕಲಾಯಿ ವಲಯಾಧ್ಯಕ್ಷ ನೌಶದ್ ಕಲಾಯಿ, ಟಿ.ಎಸ್.ಎಫ್. ಗೌರವಾಧ್ಯಕ್ಷ ಯಾಕೂಬ್ ಉಸ್ಮಾನ್ ಕಲಾಯಿ, ಜಿಜಿಸಿ ಸದಸ್ಯರಾದ ಅಶ್ಫಾಕ್, ರಮ್ಲಾನ್, ಶರೀಫ್ ಬಿತ್ತುಪಾದೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment