ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವರ್ಚುವಲ್ ವಿಚಾರ ಸಂಕಿರಣ ಸಮಾಪ್ತಿ - Karavali Times ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವರ್ಚುವಲ್ ವಿಚಾರ ಸಂಕಿರಣ ಸಮಾಪ್ತಿ - Karavali Times

728x90

2 August 2020

ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವರ್ಚುವಲ್ ವಿಚಾರ ಸಂಕಿರಣ ಸಮಾಪ್ತಿ






ಮಂಗಳೂರು (ಕರಾವಳಿ ಟೈಮ್ಸ್) :
ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯ ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ಕಂಪ್ಯೂಟೇಶನಲ್ ಫಿಸಿಕ್ಸ್ ಇನ್ ಎಮಜಿರ್ಂಗ್ ಟೆಕ್ನಾಲಜಿ ಎಂಬ ಅಂತರಾಷ್ಟ್ರೀಯ ಕಾರ್ಯಾಗಾರ ಶನಿವಾರ ನಡೆಯಿತು.

    ಮುಖ್ಯ ಅತಿಥಿಯಾಗಿ ಎ ಶ್ಯಾಮರಾವ್ ಫೌಂಡೇಶನ್ ಉಪಧ್ಯಕ್ಷ ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್‍ರಾವ್ ಭಾಗವಹಿಸಿದ್ದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್. ಐತಾಳ್ ಕಂಪ್ಯೂಟೇಶನಲ್ ಫಿಸಿಕ್ಸ್ ತಂತ್ರಜ್ಞಾನಗಳ ಕುರಿತು ವಿವರಿಸಿದರು.

    ಸಂಕಿರಣದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಭಾಷಣಗಾರರಾದ ಘಾನಾ ಅಕ್ರಾ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ನಾನಯಾವ್ ಅಸಬೇರ್, ರೊಮ್ಯಾನಿಯಾ ಯೂನಿವರ್ಸಿಟಿ ಆಫ್ ಕ್ರೊವಾದ ಡಾ. ಆಡ್ರೀನಾಬುರ್ಲೆ, ಇಸ್ರೆಲ್ ಬಾರ್ಲಾನ್‍ವಿಶ್ವವಿದ್ಯಾಲಯದ ಡಾ. ಅರೂಪ್ ಚಕ್ರಬೂರ್ತಿ, ನವದೆಹಲಿ ಕೃಷಿ ಹಾಗೂ ರೈತರ ಕಲ್ಯಾಣಾಭಿವೃದ್ಧಿ ಸಚಿವಾಲಯ ಐಸಿಎಆರ್-ಡಿಎಆರ್‍ಇ ಇದರ ಪೀಯೂಷ್ ಮಿಶ್ರ, ಚೆನ್ನೈ ಎಚ್‍ಸಿಎಲ್ ಟೆಕ್ನಾಲಜಿಸ್ ಇದರ ಟಿ ಸೆಂತಿಲ್ ಕುಮಾರ್, ನೋಯ್ಡಾ ದಶಾರ್ದ ವಿಶ್ವವಿದ್ಯಾಲಯದ ಡಾ. ಸುದೇಶ್ನಾಚಾಕ್ರೋಬಾರ್ಡಿ ಅವರು ವಿವಿಧ ವಿಷಯಾಧಾರಿತವಾಗಿ ಮಾತನಾಡಿದರು.

    ಸಂಯೋಜಕಿ ಡಾ. ಎ. ಜಯಂತಿದೇವಿ ಮಾತನಾಡಿ, ದೇಶ ವಿದೇಶಗಳಿಂದ 100ಕ್ಕೂ ಹೆಚ್ಚಿನ ಸಂಶೋಧನಾ ಬರಹಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 54 ಬರಹಗಳು ಈ ಸಂಕಿರಣದಲ್ಲಿ ಪ್ರಸ್ತುತಪಡಿಸಲು ಹಾಗೂ ಮುದ್ರಣಗೊಳ್ಳಲು ಆಯ್ಕೆಯಾಗಿವೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ಸಿಸಿಐಎಸ್‍ನ ಡೀನ್ ಪ್ರೊ. ಶ್ರೀಧರ ಆಚಾರ್ಯ ಸ್ವಾಗತಿಸಿ, ಡಾ. ಕೃಷ್ಣಪ್ರಸಾದ್ ಕೆ. ವಂದಿಸಿದರು. ವರ್ಚುವಲ್ ವೇದಿಕೆಯ ಸಿಸ್ಕೋ ವೆಬ್ ಎಕ್ಸ್, ಯೂಟ್ಯೂಬ್ ಹಾಗೂ ಫೇಸ್‍ಬುಕ್ ಮೂಲಕ ವಿಚಾರ ಸಂಕಿರಣದ ನೇರಪ್ರಸಾರ ಪ್ರಸ್ತುತಪಡಿಸಲಾಗಿತ್ತು.






  • Blogger Comments
  • Facebook Comments

0 comments:

Post a Comment

Item Reviewed: ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವರ್ಚುವಲ್ ವಿಚಾರ ಸಂಕಿರಣ ಸಮಾಪ್ತಿ Rating: 5 Reviewed By: karavali Times
Scroll to Top