ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ಮತ್ತೆ ಬಿರುಸಿನಿಂದ ಮಳೆಯಾಗುತ್ತಿದ್ದು, ಜೀವನದಿ ನೇತ್ರಾವತಿ ನದಿ ನೀರಿನ ಮಟ್ಟ ರಾತೋರಾತ್ರಿ ಏರಿಕೆಯಾಗುತ್ತಿದೆ. ನದಿ ನೀರಿನ ಮಟ್ಟ 7.5 ಮೀಟರ್ ಸಮೀಪಿಸುತ್ತಿದ್ದು, ತಾಲೂಕಿನ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗುತ್ತಿದೆ. ಪಾಣೆಮಂಗಳೂರು, ಬಂಟ್ವಾಳ, ಗೂಡಿನಬಳಿ ಮೊದಲಾದೆಡೆ ನೆರೆ ಭೀತಿ ಉಂಟಾಗಿದೆ. ಆಲಡ್ಕ ಕಿರು ಸೇತುವೆಯ ಮೇಲೆ ನೆರೆ ನೀರು ಬಂದಿದ್ದು, ನೀರಿನ ಏರಿಕೆ ಹೆಚ್ಚಾದಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಳ್ಳಲಿದೆ. ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಕುಟುಂಬಗಳು ತಮ್ಮ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಬಂಟ್ವಾಳದಲ್ಲಿ ನೇತ್ರಾವತಿಯ ಅಪಾಯದ ಮಟ್ಟ 8.5. ಮೀ. ಆಗಿದ್ದು, ತಗ್ಗು ಪ್ರದೇಶದ ಜನ ಎಚ್ಚರದಿಂದ ಇರುವಂತೆ ತಾಲೂಕಾಡಳಿತ ಎಚ್ಚರಿಕೆ ನೀಡಿದೆ.
0 comments:
Post a Comment