ಮಂಗಳೂರು (ಕರಾವಳಿ ಟೈಮ್ಸ್) : ನಡುಪದವು ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ ವಿಭಾಗದ ಎಚ್.ಒ.ಡಿ. ಹಾಗೂ ಡೀನ್ ಆಗಿದ್ದ ಡಾ. ಎಸ್. ಅಬ್ದುಲ್ ರಹಿಮಾನ್ ಇಂಜಿನಿಯರ್ (60) ಅವರು ಅಲ್ಪಕಾಲದ ಅನಾರೋಗ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.
ಮೂಲತಃ ಸಾಲೆತ್ತೂರು ಸಮೀಪದ ತಲೆಕ್ಕಿ ನಿವಾಸಿಯಾಗಿರುವ ಇವರು ಪ್ರಸ್ತುತ ನಾಟೆಕಲ್ ಸಮೀಪದ ಹಿದಾಯತ್ ನಗರದಲ್ಲಿ ವಾಸವಾಗಿದ್ದಾರೆ. ಬ್ಯಾರಿ ಸಮುದಾಯದ ಓರ್ವ ಮೇಧಾವಿಯಾಗಿರುವ ಇವರು ಪ್ರತಿಷ್ಠಿತ ಮಣಿಪಾಲ ಎಂ.ಐ.ಟಿ.ಯಲ್ಲಿ ಬಿ.ಟೆಕ್ ಪದವೀಧರರಾಗಿದ್ದು, ಇಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್ ವಿಭಾಗದ ಎಂ.ಟೆಕ್ ಹಾಗೂ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇಂಜಿನಿಯರ್ ಅಬ್ದುಲ್ ರಹಿಮಾನ್ ಎಂದೇ ಚಿರಪರಿಚಿತರಾಗಿರುವ ಇವರು ಕೆ.ಆರ್.ಇ.ಸಿ., ಸಂತ ಆಗ್ನೆಸ್ ಕಾಲೇಜು, ಭಟ್ಕಳ ಅಂಜುಮನ್ ಇಂಜಿನಿಯರಿಂಗ್ ಕಾಲೇಜು, ಇನೋಳಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯೇನಪೋಯ ವಿಶ್ವವಿದ್ಯಾನಿಲಯ ಮೊದಲಾದೆಡೆ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ನಡುಪದವು ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊಫೆಸರ್ ಹಾಗೂ ಎಚ್.ಒ.ಡಿ. ಆಗಿ ಸೇವೆ ಸಲ್ಲಿಸುತ್ತಿದ್ದರು. ಧಾರ್ಮಿಕವಾಗಿಯೂ ಅಪಾರ ಜ್ಞಾನ ಹೊಂದಿದ್ದ ಇವರು ಇಸ್ಲಾಂ ಅಂಡ್ ಸೈನ್ಸ್ ಎಂಬ ಮ್ಯಾಗಝಿನ್ ಸಂಪಾದಕರೂ ಆಗಿದ್ದರು. ಚಿಂತಕ ಹಾಗೂ ವಾಗ್ಮಿಯೂ ಆಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, 6 ಮಂದಿ ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
0 comments:
Post a Comment