ಬಂಟ್ವಾಳ (ಕರಾವಳಿ ಟೈಮ್ಸ್) : ರೈತ ಕಾರ್ಮಿಕರಿಂದ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ದೇಶ ಉಳಿಸಿ ಕಾರ್ಯಕ್ರಮದ ಭಾಗವಾಗಿ ಆಗಸ್ಟ್ 10 ರಂದು ಸೋಮವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಬೆಳಿಗ್ಗೆ 10 ಗಂಟೆಗೆ ವಿವಿಧ ಸಂಘಟನೆಗಳ ಹಾಗೂ ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ, ಅಲ್ಪಸಂಖ್ಯಾತ ಸಮುದಾಯದ ಬೆಂಬಲದೊಂದಿಗೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶ ಉಳಿಸಿ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಕೋವಿಡ್-19 ಸಮರ್ಥ ನಿಯಂತ್ರಣ, ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್ ಕಾಯಿದೆ ತಿದ್ದುಪಡಿಗಳ ವಾಪಸ್ಸಾತಿ, ಕಾರ್ಮಿಕ ಕಾನೂನುಗಳ ತಿದ್ದುಪಡಿಗಳ ವಿರುದ್ದ, ನೂತನ ಶಿಕ್ಷಣ ನೀತಿ ವಾಪಸಾತಿ, ಪ್ರತೀ ಕುಟುಂಬಕ್ಕೆ ಮಾಸಿಕ 7,500/- ರೂಪಾಯಿ ನೇರ ನಗದು ವರ್ಗಾವಣೆ ಹಾಗೂ 10 ಕೆಜಿ ಉಚಿತ ಆಹಾರ ಧಾನ್ಯ ವಿತರಣೆ, ಮಹಿಳೆಯರು, ದಲಿತರು, ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ತಡೆ, ಉಪಕರಣ ಖರೀದಿ ಹಗರಣದ ಸಮಗ್ರ ತನಿಖೆ ಇವೇ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ಎಐಟಿಯುಸಿ, ಸಿಐಟಿಯು, ಎಐಕೆಎಸ್, ಎಸ್ ಎಫ್ ಐ, ಎಐಎಸ್ ಎಫ್, ಎಐವೈಎಫ್, ಡಿವೈಎಫ್ ಐ, ಎನ್ ಎಫ್ ಐ ಡಬ್ಲ್ಯು, ಜೆಎಂಎಸ್ ಮೊದಲಾದ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment