ಮೈಸೂರು (ಕರಾವಳಿ ಟೈಮ್ಸ್) : ಬೆಂಗಳೂರಿನ ಡಿ.ಜೆ. ಹಳ್ಳಿಯ ನವೀನ್ ಕುಮಾರ್ ಎಂಬಾತ ಸಾಮಾಜಿಕ ಜಾಲ ತಾಣದಲ್ಲಿ ಇಸ್ಲಾಮಿನ ಪ್ರವಾದಿಗಳ ಬಗ್ಗೆ ಅವಮಾನಿಸಿದ್ದು, ಅತ್ಯಂತ ಖಂಡೀನಿಯವಾಗಿದ್ದು, ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮೈಸೂರಿನ ದಾರುಲ್ ಉಲೂಂ ಹಝ್ರತ್ ಟೀಪು ಸುಲ್ತಾನ್ ಫೈಜಾನೆ ಗರೀಬುನ್ನವಾಜ್ ಪದಾಧಿಕಾರಿಗಳು ಮೈಸೂರು-ಉದಯಗಿರಿ ಠಾಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಇಸ್ಲಾಮಿನ ಪ್ರವಾದಿಗಳು ಸರ್ವ ಜನಾಂಗಕ್ಕೂ ಮಾದರಿ ಹಾಗೂ ನಮಗೆ ಪ್ರಾಣಪ್ರಿಯರು. ಅಂತಹ ಪ್ರವಾದಿಗಳ ಬಗ್ಗೆ ಅವಹೇಳಿಸುವುದು ಸಹಿಸಲು ಅಸಾಧ್ಯವಾಗಿದೆ. ಇಂತಹ ಕಿಡಿಗೇಡಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದಾರುಲ್ ಉಲೂಂ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
0 comments:
Post a Comment