ಬೆಂಗಳೂರು (ಕರಾವಳಿ ಟೈಮ್ಸ್) : ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಲಭೆ ಕೋರರಿಂದ ಆಂಜನೇಯಸ್ವಾಮಿ ದೇಗುಲವನ್ನು ರಕ್ಷಿಸಲು ಸ್ಥಳೀಯ ಮುಸ್ಲಿಂ ಯುವಕರು ಮಾನವ ಸರಪಳಿ ನಿರ್ಮಿಸಿ ಕರ್ತವ್ಯ ಪ್ರಜ್ಞೆ ಮೆರೆದು ಸೌಹಾರ್ದತೆ ಕಾಪಾಡಿದ ಘಟನೆಯೂ ನಡೆದಿದೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಹಿಂಸಾಚಾರದ ನಡುವೆ ಡಿಜೆ ಹಳ್ಳಿಯ ಸ್ಥಳೀಯ ಮುಸ್ಲಿಂ ಯುವಕರು ಧರ್ಮವನ್ನು ಪಕ್ಕಕ್ಕಿಟ್ಟು, ಮಾನವ ಸರಪಳಿ ನಿರ್ಮಿಸಿ, ಕಿಡಿಗೇಡಿಗಳ ಸಂಭಾವ್ಯ ದೇಗುಲ ಮೇಲಿನ ದಾಳಿಯನ್ನು ತಪ್ಪಿಸಿ ಕೋಮು ಸೌಹಾರ್ಧತೆಗೆ ಸಾಕ್ಷಿಯಾಗಿದ್ದು, ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಉದ್ರಿಕ್ತರ ಗುಂಪೆÇಂದು ದಾಳಿ ನಡೆಸಿ ಕಲ್ಲು ತೂರಾಟ ಮಾಡಿದ್ದಲ್ಲದೇ ಮನೆಗೆ ಬೆಂಕಿ ಹಚ್ಚಿದ್ದರು. ಅದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹಚ್ಚಿ ದುಷ್ಕರ್ಮಿಗಳಿ ದಾಂಧಲೆ ನಡೆಸಿದ್ದರು. ಇದರ ನಡುವೆ ಶಾಸಕರ ಮನೆಯ ಎದುರು ಭಾಗದಲ್ಲೇ ಆಂಜನೇಯಸ್ವಾಮಿ ದೇಗುಲವಿದ್ದು, ಈ ದೇಗುಲದ ಮೇಲೆ ದಾಳಿಯಾಗಬಹುದು ಎಂಬ ಶಂಕೆ ಮೇರೆಗೆ ಸ್ಥಳೀಯ ಯುವಕರು ಮಾನವ ಸರಪಳಿ ನಿರ್ಮಿಸಿ, ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಈ ಘಟನೆಯ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
0 comments:
Post a Comment