ಸಿನಿಮಾ ಥಿಯೇಟರ್, ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಸೆ 30ರವರೆಗೆ ಶಾಲಾ-ಕಾಲೇಜು ತೆರೆಯುವಂತಿಲ್ಲ, ಆನ್‍ಲೈನ್ ತರಗತಿಗಳಿಗೆ ಸೀಮಿತ
ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ಇಲ್ಲ, ವಂದೇ ಭಾರತ್ ಮಿಷನ್ ವಿಮಾನಗಳು ಮಾತ್ರ ಹಾರಾಟ
ನವದೆಹಲಿ (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಅನ್‍ಲಾಕ್ 4.0 ಮಾರ್ಗಸೂಚಿಗಳನ್ನು ಶನಿವಾರ ಸಂಜೆ ಪ್ರಕಟಿಸಿದೆ. ಸೆಪ್ಟೆಂಬರ್ 30 ರವರೆಗೆ ಲಾಕ್‍ಡೌನ್ ಮುಂದುವರಿಯಲಿದ್ದು, ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ಅನುಮತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ಮಿತಿಯನ್ನು 100 ಮಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಜೊತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಆದೇಶ ಸೆಪ್ಟೆಂಬರ್ 21 ರಿಂದ ಅನ್ವಯವಾಗಲಿದೆ. ಹವಾ ನಿಯಂತ್ರಣ ರಹಿತ ಚಿತ್ರ ಮಂದಿರಗಳನ್ನು ಸೆಪ್ಟೆಂಬರ್ 21ರಿಂದ ತೆರೆಯಲು ಸರಕಾರ ಅನ್‍ಲಾಕ್-4 ರ ಮಾರ್ಗಸೂಚಿ ಪ್ರಕಾರ ಅನುಮತಿ ನೀಡಿದೆ.
ಸೆಪ್ಟೆಂಬರ್ 30ರವರೆಗೆ ಶಾಲೆ ಕಾಲೇಜು ಮತ್ತು ತರಬೇತಿ ಕೇಂದ್ರಗಳು ತೆರೆಯುವಂತಿಲ್ಲ. ಆನ್‍ಲೈನ್ ತರಗತಿಗಳು ಮುಂದುವರಿಯಲಿದ್ದು, ಶಾಲೆಗಳು ಶೇ. 50 ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು. ಆನ್‍ಲೈನ್ ಕ್ಲಾಸ್ ಅಥವಾ ಟೆಲಿ ಕೌನ್ಸಿಲಿಂಗ್ ಹಾಗೂ ಇನ್ನಿತರ ಕಾರ್ಯಗಳಿಗೆ ಶೇ. 50 ರಷ್ಟು ಸಿಬ್ಬಂದಿಯನ್ನು ಶಾಲೆಗಳು ಬಳಸಿಕೊಳ್ಳುವುದು.
ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿದ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಪೆÇೀಷಕರ ಲಿಖಿತ ಅನುಮತಿ ಪಡೆದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಬಹುದು. ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಅಥವಾ ಪ್ರಾಯೋಗಿಕ ತರಬೇತಿಗೆ ಅನುಮತಿ ನೀಡಲಾಗಿದೆ.
ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿನ ಸ್ವಿಮಿಂಗ್ ಪೂಲ್, ಸಿನಿಮಾ ಹಾಲ್, ಪಾರ್ಕ್ ಸೇರಿದಂತೆ ಇನ್ನಿತರ ಸೇವೆಗಳು ಸಾರ್ವಜನಿಕರಿಗೆ ಮುಕ್ತವಾಗಲಿವೆ. ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿಲ್ಲ. ವಂದೇ ಭಾರತ್ ಮಿಷನ್ ವಿಮಾನಗಳು ಮಾತ್ರ ಹಾರಾಟ ನಡೆಸಲಿವೆ.
ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್‍ನಲ್ಲಿ ನೋಂದಾಯಿಸಲಾದ ಅಲ್ಪಾವಧಿಯ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಅಥವಾ ಉದ್ಯಮಶೀಲತೆ, ವಾಣಿಜ್ಯೋದ್ಯಮ ಮತ್ತು ಸಣ್ಣ ಉದ್ಯಮ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಂಸ್ಥೆ, ಭಾರತೀಯ ಉದ್ಯಮ ಸಂಸ್ಥೆಯ ತರಬೇತಿಗೆ ಅನುಮತಿ ನೀಡಲಾಗಿದೆ.
0 comments:
Post a Comment